ಮನೆಯೊಳಗೆ ಉಸಿರುಕಟ್ಟಿ ಒಂದೇ ಕುಟುಂಬದ ಐವರು ಸಾವು

ಚಳಿಯಿಂದ ಪಾರಾಗಲು ಬಳಸಿದ ಹೀಟರ್‌ ಮೃತ್ಯುವಾಯಿತು

ಶ್ರೀನಗರ: ಮನೆಯಲ್ಲಿಯೇ ಉಸಿರುಗಟ್ಟಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ದಾರುಣ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಸಂಭವಿಸಿದೆ. ಚಳಿಯಿಂದ ಪಾರಾಗಲು ಬಳಸಿದ ಎಲ್‌ಪಿಜಿ ರೂಮ್‌ ಹೀಟರ್‌ ಅವರ ಸಾವಿಗೆ ಕಾರಣ ಎನ್ನಲಾಗಿದೆ.

ಬಾರಾಮುಲ್ಲಾ ಜಿಲ್ಲೆಯ ಉರಿಯಿಂದ ಬಂದಿದ್ದ ದಂಪತಿ ಹಾಗೂ ಅವರ ಮೂವರು ಮಕ್ಕಳು ಶ್ರೀನಗರದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಶ್ರೀನಗರ ಜಿಲ್ಲೆಯ ಪಂದ್ರಾಥಾನ್ ಪ್ರದೇಶದಲ್ಲಿ ದಂಪತಿ ಮತ್ತು ಅವರ 3 ಮಕ್ಕಳು ಸೇರಿದಂತೆ ಒಂದೇ ಕುಟುಂಬದ 5 ಸದಸ್ಯರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.































 
 

ಏಜಾಜ್ ಅಹ್ಮದ್ ಭಟ್ (38), ಅವರ ಪತ್ನಿ ಸಲೀಮಾ (32), ಮತ್ತು ಅವರ ಮೂವರು ಮಕ್ಕಳು-ಆರೀಬ್ (3), ಹಮ್ಜಾ (18 ತಿಂಗಳು), ಮತ್ತು ಒಂದು ತಿಂಗಳ ಮಗು ಎಂದು ಗುರುತಿಸಲಾಗಿದೆ.
ಉಸಿರುಗಟ್ಟಿ ಅವರು ಪ್ರಜ್ಞಾಹೀನರಾಗಿದ್ದರು. ಅವರನ್ನು ಆಸ್ಪತ್ರೆಗೆ ಒಯ್ದರೂ ಅಲ್ಲಿಗೆ ತಲಪುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದರು.

ಹೀಟರ್‌ನಿಂದ ಸೋರಿಕೆಯಾದ ಕಾರ್ಬನ್‌ ಮೊನೊಕ್ಸೈಡ್‌ ಅವರ ಸಾವಿಗೆ ಕಾರಣ ಎನ್ನಲಾಗಿದೆ. ದೇಶದಲ್ಲಿ ಈ ವರ್ಷ ಚಳಿ ಹೆಚ್ಚಿದ್ದು, ಅದರಲ್ಲೂ ಕಾಶ್ಮೀರ ಅಕ್ಷರಶ ಮರಗಟ್ಟಿ ಹೋಗಿದೆ. ಜನರು ಚಳಿಯಿಂದ ಪಾರಾಗಲು ಹೀಟರ್‌, ಅಗ್ಗಿಷ್ಟಿಕೆ ಇತ್ಯಾದಿಗಳನ್ನು ಬಳಸುತ್ತಿದ್ದಾರೆ. ಇವುಗಳೇ ಕೆಲವೊಮ್ಮೆ ಪ್ರಾಣಕ್ಕೆ ಕುತ್ತಾಗುತ್ತಿವೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top