ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಹಿನ್ನಲೆಯಲ್ಲಿ ಶ್ರೀ ದೇವರ ಬಯ್ಯದ ಬಲಿ ಉತ್ಸವ ದಿನವಾದ ಜ.18 ರಂದು ಸಮರ್ಪಣ್ ವಿಟ್ಲ ಇವರ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ‘ಸಮರ್ಪಣ್ ಕಲೋತ್ಸವ -2025’ ಅಂಗವಾಗಿ ಮಂಗಳೂರು ಬೆನಕ ಆರ್ಟ್ಸ್ ವತಿಯಿಂದ ‘ಪೊರಿಪುದಪ್ಪೆ ಜಲದುರ್ಗೆ’ ತುಳು ಸಿನಿ ನಾಟಕ ವಿಶೇಷ ದೃಶ್ಯ ಸಂಯೋಜನೆಯೊಂದಿಗೆ ನಡೆಯಲಿದ್ದು, ಸಮರ್ಪಣ್ ಸೇವಾ ಪ್ರಕಲ್ಪದಲ್ಲಿ ನಿರ್ಮಿಸಿದ ಮನೆ ಹಸ್ತಾಂತರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಗನ್ನಾಥ ಸಾಲ್ಯಾನ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ಸಮರ್ಪಣ್ ಸೇವಾ ಪ್ರಕಲ್ಪದಲ್ಲಿ ವಿಟ್ಲ ಕಸಬಾ ಗ್ರಾಮದ ಇರಂದೂರುನಲ್ಲಿ ಬಡ ಕುಟುಂಬಕ್ಕೆ ಸಮರ್ಪಣ್ ಸೇವಾ ಪ್ರಕಲ್ಪದಲ್ಲಿ ನಿರ್ಮಿಸಿದ ಮನೆ ಹಸ್ತಾಂತರ ಈ ಸಂದರ್ಭ ನಡೆಯಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭ ಸಮರ್ಪಣ್ ವಿಟ್ಲ ದ ಅಧ್ಯಕ್ಷ ಯಶವಂತ . ಎನ್., ಗೌರವಾಧ್ಯಕ್ಷ ಕೃಷ್ಣಯ್ಯ ಕೆ ವಿಟ್ಲ ಅರಮನೆ, ಉಪಾಧ್ಯಕ್ಷರಾದ ಯಾದವ ಮಡಿವಾಳಕೋಡಿ, ಸೂರಜ್ ಕೋಟ್ಯಾನ್, ರವಿವರ್ಮ ವಿಟ್ಲ ಅರಮನೆ, ಕಾರ್ಯದರ್ಶಿ ರೋಹಿತ್ ಕಟ್ಟೆ, ಜತೆ ಕಾರ್ಯದರ್ಶಿ ಪ್ರಕಾಶ್ ಮಾಸ್ತರ್, ಕೋಶಾಧಿಕಾರಿ ನಿಖಿಲ್ ಸಾಲ್ಯಾನ್, ಗೌರವ ಸಲಹೆಗಾರ ವಿಶ್ವನಾಥ ನಾಯ್ತೋಟ್ಟು, ಸಂಘಟನಾ ಕಾರ್ಯದರ್ಶಿ ರವಿಶಂಕರ್, ಸಂಚಾಲಕ ಹರೀಶ್ ಕೆ ವಿಟ್ಲ, ಸದಸ್ಯರುಗಳಾದ ದೀಪಕ್ ಕಟ್ಟೆ, ಪವನ್ ಕಟ್ಟೆ, ಧನಂಜಯ ನಾಯ್ಕ್,
ಪೂಜಿತ್ ಸಾಲ್ಯಾನ್, ಧನಂಜಯ ನೆಕ್ಕರೆ ಕಾಡು, ಪವನ್ ಶಿವಾಜಿನಗರ, ಪ್ರಮುಖರಾದ ಜಯರಾಮ ಬಲ್ಲಾಳ್, ಸಂಜೀವ ಮಂಕುಡೆ,
ರವಿ ಕಟ್ಟೆ, ಯೋಗಿಶ್ ದೇವಸ್ಯ, ಪ್ರಕಾಶ್, ಭಾರತಿ ಪ್ರಕಾಶ್, ಸುನಿಲ್ ಮುಂತಾದವರು ಉಪಸ್ಥಿತರಿದ್ದರು.