ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವದ ಸವಿನೆನಪಿಗಾಗಿ “ದಶಸ್ಮೃತಿ’ ಸ್ಮರಣ ಸಂಚಿಕೆ ಲೋಕಾರ್ಪಣೆ | ಸಂಚಿಕೆ ಲೋಕಾರ್ಪಣೆಗೊಳಿಸಿದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ | ಚಲನಚಿತ್ರ ನಟ-ನಟಿಯರ ತಾರಾ ಮೆರುಗು

ಪುತ್ತೂರು: ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವದ ಸವಿನೆನಪಿಗಾಗಿ ‘ದಶಸ್ಮೃತಿ’ ಸ್ಮರಣ ಸಂಚಿಕೆ ಬಿಡುಗಡೆ ಶನಿವಾರ ತೆಂಕಿಲ ಒಕ್ಕಲಿಗ ಸಮುದಾಯ ಭವನದಲ್ಲಿ ನಡೆದ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಂಭ್ರಮದಲ್ಲಿ ನಡೆಯಿತು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ರಿಮೋಟ್ ಒತ್ತುವ ಮೂಲಕ ‘ದಶಸ್ಮೃತಿ’ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಮಾಜಿ ಶಾಸಕ ಸಂಜೀವ ಮಠಂದೂರು, ರಾಜ್ಯ ಒಕ್ಕಲಿಗ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಶಾಂತಾ ಸುರೇಂದ್ರ, ಪುತ್ತೂರು ಒಕ್ಕಲಿಗ ಸಮುದಾಯಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಸ್ವಸಹಾಯ ಟ್ರಸ್ಟ್‍ ಗೌರವಾಧ್ಯಕ್ಷ ಎ.ವಿ.ನಾರಾಯಣ, ಅಧ್ಯಕ್ಷ ಡಿ.ವಿ.ಮನೋಹರ್, ಪ್ರಧಾನ ಕಾರ್ಯದರ್ಶಿ ದಿವ್ಯ ಪ್ರಸಾದ್‍ ಎ.ಎಮ್‍., ದಶಮಾನೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್‍ ಚಾರ್ವಾಕ, ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಅಮರನಾಥ ಗೌಡ, ಮಹಿಳಾ ಘಟಕದ ಅಧ್ಯಕ್ಷೆ ವಾರಿಜ ಬೆಳ್ಳಿಯಪ್ಪ, ಸ್ಮರಣ ಸಂಚಿಕೆ ಸಮಿತಿಯ ಎಸ್‍.ವಸಂತ ವೀರಮಂಗಲ, ನಾಗೇಶ್‍ ಕೆಡೆಂಜಿ, ಸೀತಾರಾಮ ಕೇವಳ, ರಾಮಚಂದ್ರ ಕುದ್ಮಾರು, ಸಂಧ್ಯಾ ಶಶಿಧರ್ ಉಪಸ್ಥಿತರಿದ್ದರು.































 
 

ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಚಿತ್ರನಟ ಪ್ರಸನ್ನ ಬಾಗಿನ ಮಾತನಾಡಿ, ಗೌಡ ಸಮುದಾಯದವರು ತುಂಬಾ ಸಾಧನೆ ಮಾಡಿದ್ದಾರೆ. ರಾಷ್ಟ್ರಕವಿ, ಕೆಂಗಲ್ ಹನುಮಂತ, ಪಿಟೀಲು ಚೌಡಯ್ ನವರು ಒಕ್ಕಲಿಗರು ಎಂಬುದಕ್ಕೆ ಹೆಮ್ಮೆಯಾಗುತ್ತದೆ. ಒಕ್ಕಲಿಗರಿಂದ ದೊಡ್ಡ ಕಾರ್ಯವಾಗಬೇಕು. ತುಂಬಾ ಕಷ್ಟದಲ್ಲಿ ಇರುವವರಿಗೆ ವಿದ್ಯಾದಾನ, ಉದ್ಯೋಗ ದೊದೊರಕಿಸಿಕೊಡುವಲ್ಲಿ ಪ್ರಯತ್ನಿಸಬೇಕು. ಹೀಗೆ ಮಾಡಿದರೆ ಒಕ್ಕಲಿಗರ ಹೆಸರು ಮತ್ತಷ್ಟು ಪಸರಿಸಿದಂತಾಗುತ್ತದೆ ಎಂದರು.

ಕಿರುತೆರೆ ನಟಿ ಹಂಸ ಗೌಡ ಮಾತನಾಡಿ, ಪುತ್ತೂರಿಗೆ ಪ್ರಥಮ ಬಾರಿಗೆ ಬಂದದ್ದು. ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಒಳ್ಳೆಯ ಗುರಿಯನ್ನು ಹೊಂದಿದೆ. ಒಕ್ಕಲಿಗ ಸಂಘ ಹೆಮ್ಮರವಾಗಿ ಬೆಳೆಯಬೇಕು. ಸಂಘದಿಂದ ಒಕ್ಕಲಿಗರಿಗೆ, ಜಾತಿ ಧರ್ಮಕ್ಕೆ ಮಾತ್ರ ಸೀಮಿತವಾಗದೆ ಅಗತ್ಯವಿರುವವರಿಗೆ ಸಹಾಯ ಮಾಡುವಂತಾಗಬೇಕು ಎಂದರು.

ಈ ಸಂದರ್ಭದಲ್ಲಿ ಹಂಸ ಗೌಡ ಹಾಗೂ ಪ್ರಸನ್ನ ಬಾಗಿನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ರಾಜ್ಯ ಮಹಿಳಾ ಒಕ್ಕಲಿಗರ ಘಟಕದ ರಾಜ್ಯಾಧ್ಯಕ್ಷೆ ಡಾ.ಶಾಂತಾ ಸುರೇಂದ್ರ, ಪುತ್ತೂರು ಒಕ್ಕಲಿಗ ಸಮುದಾಯಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಅಮರನಾಥ ಗೌಡ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಬಿ.ಸಿ..ಪದ್ಮರಾಜ್‍, ಉದಿತ್ ಶ್ಯಾಮ್‍ ಉಪಸ್ಥಿತರಿದ್ದರು. ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಗೌರವಾಧ್ಯಕ್ಷ ಎ.ವಿ.ನಾರಾಯಣ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top