ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ರಜತ ಮಹೋತ್ಸವ | ಬಿಜಿಎಸ್ ಪಿಯು ಕಾಲೇಜು ಕಟ್ಟಡ ಉದ್ಘಾಟನೆ, ಬಿಜಿಎಸ್ ಸುವರ್ಣ ಭವನಕ್ಕೆ ಶಂಕುಸ್ಥಾಪನೆ, ರಜತ ತುಲಾಭಾರ | ಸತ್ಯದ ಹಾದಿಯಲ್ಲಿ ನಡೆದವರು ಒಕ್ಕಲಿಗರು : ಡಿ.ವಿ.ಸದಾನಂದ ಗೌಡ | ಮಾಡುವ ಕೆಲಸವನ್ನು ನಿಸ್ವಾರ್ಥವಾಗಿ ಮಾಡಬೇಕು : ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ | ಸಮಾಜದ ಜನರ ಒಳಿತಿಗಾಗಿ ಮಹಾಸ್ವಾಮೀಜಿಯವರು ದುಡಿದಿದ್ದಾರೆ : ಪ್ರಹ್ಲಾದ ಜೋಶಿ | ಶ್ರೀ ಆದಿಚುಂಚನಗಿರಿ ಜ್ಞಾನ ನೀಡುವ ಮೂಲಕ ಯುವ ಸಮುದಾಯಕ್ಕೆ ಕೊಡುಗೆ ನೀಡಿದೆ : ಕ್ಯಾ.ಬ್ರಿಜೇಶ್ ಚೌಟ | ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಶೋಷಿತ ಸಮುದಾಯಗಳನ್ನು ಮೇಲೆತ್ತುವ ಕಾರ್ಯಕ್ಕೆ ಮುಂದಾಗಿದೆ : ಬಸವಮೂರ್ತಿ ಮಹಾಸ್ವಾಮೀಜಿ | ಪ್ರೀತಿಸುವ ವ್ಯಕ್ತಿತ್ವವನ್ನು ಕರುಣಿಸಿದ ಮಹಾಗುರು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು : ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ

ಮಂಗಳೂರು: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ರಜತ ಮಹೋತ್ಸವದ ಅಂಗವಾಗಿ ಬಿಜಿಎಸ್ ಪಿಯು ಕಾಲೇಜು ಕಟ್ಟಡ ಉದ್ಘಾಟನೆ, ಬಿಜಿಎಸ್ ಸುವರ್ಣ ಭವನಕ್ಕೆ ಶಂಕುಸ್ಥಾಪನೆ ಹಾಗೂ ರಜತ ತುಲಾಭಾರ ಕಾರ್ಯಕ್ರಮ ಇಂದು ಬಿಜಿಎಸ್ ಪಿಯು ಕಾಲೇಜು ಆವರಣದಲ್ಲಿ ನಡೆಯಿತು.

ಸತ್ಯದ ಹಾದಿಯಲ್ಲಿ ನಡೆದವರು ಒಕ್ಕಲಿಗರು : ಡಿ.ವಿ.ಸದಾನಂದ ಗೌಡ

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮಿಜಿಯವರು ಬರೆದ ಕರಾವಳಿಯ ಒಕ್ಕಲಿಗರು ಕೃತಿ ಬಿಡುಗಡೆ ಮಾಡಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯೇ ಒಕ್ಕಲಿಗ ಸಮುದಾಯದಿಂದ ಕೂಡಿದೆ. ಭೂಮಿಯಲ್ಲಿ ಯಾರು ಒಕ್ಕಲಿಗನಾಗಿ ಹುಟ್ಟುತ್ತಾನೋ ಅವರೆಲ್ಲರೂ ಒಕ್ಕಲಿಗರಾಗಿ ಮೇಲೇರುವ ಕನಸು ಕಾಣಬೇಕು. ಪ್ರೀತಿ, ವಿಶ್ವಾಸದ ಆಧಾರದಲ್ಲಿ ಸಮಾಜವನ್ನು ಕಟ್ಟಬೇಕು ಎಂಬ  ಆಶಯವಾಗಿದೆ. ವ್ಯವಸ್ಥೆಗಳ ಬದಲಾವಣೆ, ತಾತ್ರಿಕ ಬೆಳವಣಿಗೆಯಿಂದಾಗಿ ಅಕ್ಕಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂದು ತಿಳಿಯುವ ಸಂಕಷ್ಟ ಎದುರಾಗಿದ್ದಲ್ಲದೆ ನಮ್ಮ ಸಮಾಜ ಬೆಳೆದಿದೆ. ಭೂ ಸುಧಾರಣೆ ಬಂದ ನಂತರ ಕರಾವಳಿಯ ಒಕ್ಕಲಿಗರು ಸ್ವಂತ ದುಡಿಮೆಯತ್ತ ಸಾಗುವಂತಾಗಿದೆ. ಒಕ್ಕಲಿಗ ಸಮುದಾಯದವರು ಕೈ ಚಾಚಿದವರಲ್ಲ. ಸತ್ಯದ ಹಾದಿಯಲ್ಲಿ ನಡೆದವರು ಒಕ್ಕಲಿಗರೆಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಶ್ರೀ ಧರ್ಮ ಪಾಲನಾಥ ಸ್ವಾಮೀಜಿಯವರು ಗ್ರಾಮದ ಜನರನ್ನು ಬೆಳೆಸುವಲ್ಲಿ ಗ್ರಾಮ ವಾಸ ಮಾಡಿದ್ದಾರೆ. ನಾವೆಲ್ಲಾ ಒಂದು ಭಾವನೆಯನ್ನು ಮೂಡಿಸುವುದರ ಜೊತೆ ನಮ್ಮ ಒಕ್ಕಲಿಗ ಸಮುದಾಯ ಮತ್ತೊಂದು ಸಮುದಾಯಗಳಿಗೆ ಮಾದರಿಯಂತೆ ಬದುಕಬೇಕು ಎಂದರು.































 
 

ಮಾಡುವ ಕೆಲಸವನ್ನು ನಿಸ್ವಾರ್ಥವಾಗಿ ಮಾಡಬೇಕು : ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪಿಠಾಧಿಪತಿ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಸೆಟಲೈಟನ್ನು ಉಡಾವಣೆ ಮಾಡುವಾಗ ಹೇಗೆ ಮೂರು ಹಂತಗಳಿವೆ ಅದೇ ರೀತಿ ಜೀವನದಲ್ಲೂ ಮೂರು ಹಂತಗಳಿವೆ. ಮೊದಲನೆಯದು ಮಾಡುವ ಕೆಲಸವನ್ನು ನಿಸ್ವಾರ್ಥವಾಗಿ ಮಾಡುವುದು, ಎರಡನೇಯದು ಪೂಜೆ, ಹವನ, ಜಪಗಳು ಹಾಗೂ ಮೂರನೇಯದ್ದು ಸೇವೆಯ ಕರ್ಮ, ಭಕ್ತಿಯ ಉಪಾಸನೆ ಮಾಡುವುದು.  ಜ್ಞಾನವಿಲ್ಲದೆ ವಿದ್ಯೆಗೆ ಮುಕ್ತಿ ಸಿಗುವುದಿಲ್ಲ, ಬೆಂಕಿಯಿಲ್ಲದೆ ಅಡುಗೆ ಆಗುವುದಿಲ್ಲ. ಮಾಡುವ ಕೆಲಸವನ್ನು ನಿಸ್ವಾರ್ಥವಾಗಿ ಮಾಡಬೇಕು ಎಂದು ನುಡಿದರು.  

ಸಮಾಜದ ಜನರ ಒಳಿತಿಗಾಗಿ ಮಹಾಸ್ವಾಮೀಜಿಯವರು ದುಡಿದಿದ್ದಾರೆ : ಪ್ರಹ್ಲಾದ ಜೋಶಿ

ಕೇಂದ್ರ ಗ್ರಾಹಕ ವ್ಯವಹಾರಗಳು ಮತ್ತು ಸಾರ್ವಜನಿಕ ವಿತರಣ ಸಚಿವ ಪ್ರಹ್ಲಾದ ಜೋಶಿ ಸೆಕ್ರೇಡ್ ಹಾರ್ಟ್‍ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಈ ರೀತಿಯ ಕಾರ್ಯಕ್ರಮ ಮಾಡಲು ಕಲ್ಪನೆ, ಧೈರ್ಯ ಬೇಕು. ಪದ್ಮ ಭೂಷಣ ಪರಮಪೂಜ್ಯ ಬಾಲಗಂಗಾಧರನಾಥ ಸ್ವಾಮಿಜಿಯವರು ಗುರು ಗೋರಕ ರಕ್ಷಕನಾಥ ಹಠಯೋಗ, ಕುಂಡಲಿ ಯೋಗ, ಜಾಗರಣ ಯೋಗ ತಪಸ್ವಿಯನ್ನು ಮಾಡಿದ ಜಾಗವಿದು. ಇಂತಹ ಪರಂಪರೆಯಲ್ಲಿ ಇವತ್ತಿನ ಪೂಜ್ಯರು ಪುಣ್ಯದ ಕೆಲಸವನ್ನು ಮುಂದುವರೆಸುತ್ತಿದ್ದಾರೆ. ಅನ್ನ, ಅಕ್ಷರ, ಆಧ್ಯಾತ್ಮ, ಆರೋಗ್ಯ ಮುಖ್ಯವಾಗಿದ್ದು, ಈ ನಾಲ್ಕು ಸೂತ್ರಗಳನ್ನು ಇಟ್ಟುಕೊಂಡು ಸಮಯವನ್ನು ವ್ಯರ್ಥ ಮಾಡದೆ ಈ ಸಮಾಜದ ಜನರ ಒಳಿತಿಗಾಗಿ ಸ್ವಾಮೀಜಿಯವರು ದುಡಿದಿದ್ದಾರೆ. ಆರೋಗ್ಯ ಕೆಟ್ಟರು , ಶುಸ್ರೂಶೆಯಿಂದ ಆರೋಗ್ಯವನ್ನು ಸರಿ ಪಡಿಸಬಹುದು. ಆದರೆ ಸಮಯ ವ್ಯರ್ಥವಾದರೆ ಸಮಯವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಮಠದ ಸ್ವಾಮೀಜಿಯವರು ಸಮಯವನ್ನು ಸಮಾಜದಲ್ಲಿ ಅಮೂಲ್ಯವಾಗಿ ಬಳಸಿಕೊಂಡು ಸಮಾಜ ಸೇವೆಯನ್ನು ಮಾಡಿದ್ದಾರೆ ಎಂದ ಅವರು, ಇತ್ತಿಚಿನ ದಿನಗಳಲ್ಲಿ ಮೊಬೈಲಿನ ಆಮಿಷಕ್ಕೆ ಒಡ್ಡಿ ಸಂಸ್ಕಾರಗಳನ್ನು ಮರೆಯುತ್ತಿದ್ದಾರೆ. ಆದರೆ ಅಂತಹ ಆಮಿಷಗಳಿಗೆ ಒಳಗಾಗದಂತೆ ನೋಡಿಕೊಳ್ಳಲು ನಮ್ಮ ಪೀಠದ ಸ್ವಾಮಿಜಿಯವರು ಕೈ ಜೋಡಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರಕಬೇಕೆಂದು ಪಣ ತೊಟ್ಟಿದ್ದಾರೆ ಎಂದು ಹೇಳಿದರು.

ಶ್ರೀ ಆದಿಚುಂಚನಗಿರಿ ಜ್ಞಾನ ನೀಡುವ ಮೂಲಕ ಯುವ ಸಮುದಾಯಕ್ಕೆ ಕೊಡುಗೆ ನೀಡಿದೆ : ಕ್ಯಾ.ಬ್ರಿಜೇಶ್ ಚೌಟ

ಕರಾವಳಿ ಕಲ್ಪತರು ಕೃತಿಯನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಬಿಡುಗಡೆಗೊಳಿಸಿ ಮಾತನಾಡಿ, ಆದಿಚುಂಚನಗಿರಿ ಮಹಾಸಂಸ್ಥಾನದವರು ಜ್ಞಾನವನ್ನು ನೀಡುವ ಸೇವೆಯನ್ನು ಮಾಡುವುದು ದಕ್ಷಿಣ ಕನ್ನಡದ ಜನತೆಗೆ, ಯುವ ಸಮೂಹಕ್ಕೆ ದೊಡ್ಡ ಕೊಡುಗೆಯಾಗಿದೆ. ಭಾರತದ ಭವಿಷ್ಯವನ್ನು ರೂಪಿಸುವಲ್ಲಿ, ಸನಾತನವಾದ ಭಾರತೀಯ ಸಂಸ್ಕ್ರತಿಯ ಆಧಾರದಲ್ಲಿ ತಳಹದಿಯನ್ನು ನಿರ್ಮಾಣ ಮಾಡುವುದು ಶ್ಲಾಘನೀಯ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಶೋಷಿತ ಸಮುದಾಯಗಳನ್ನು ಮೇಲೆತ್ತುವ ಕಾರ್ಯಕ್ಕೆ ಮುಂದಾಗಿದೆ : ಬಸವಮೂರ್ತಿ ಮಹಾಸ್ವಾಮೀಜಿ

ಪರಮಪೂಜ್ಯ ಬಸವಮೂರ್ತಿ ಮಹಾಸ್ವಾಮೀ ಗುರುಪೀಠ ಆಶೀರ್ವಚನ ನೀಡಿ, ಬಹುದೊಡ್ಡ ಆಲದ ಮರದ ಕೆಳಗೆ ಸಣ್ಣ ಸಸಿಗಳು ಬೆಳೆಯುವುದಿಲ್ಲ ಎಂಬುವಂತೆ, ಇಡೀ ದೇಶದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಆಲದ ಮರಕ್ಕೆ ಹೋಲಿಸಿಕೊಂಡರೆ ಸಾಮಾಜಿಕ ವ್ಯವಸ್ಥೆಗಳಲ್ಲಿ ಕುಟುಂಬಗಳೆಂಬ ಸ್ವಾರ್ಥ ಮನಸ್ಥಿತಿಯನ್ನು ಒಳಗೊಂಡಿರುತ್ತವೆ. ಆದರೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಕುಟುಂಬದ ರೀತಿಯಲ್ಲಿ ಸ್ವಾರ್ಥದ ಚಿಂತನೆ ಮಾಡಿಲ್ಲ.  ಡಾ ಬಾಲಗಂಗಾಧರ ಸ್ವಾಮಿಜಿಯವರ ಆಲೋಚನೆ ಪ್ರಕಾರ ಆದಿಚುಂಚನಗಿರಿ ಮಹಾಸಂಸ್ಥಾನ ಭಕ್ತರಷ್ಟೆ ಸಮಾಜಮುಖಿಯಾ ಉನ್ನತಿಗೊಳ್ಳಬಾರದು, ಜೊತೆ ಜೊತೆಗೆ ಸಾಮಾಜಿಕ ಮುಖ್ಯ ವಾಹಿನಿಯಲ್ಲಿ ಎಲ್ಲಾ ಶೋಷಿತ ಸಮುದಾಯಗಳು ಸಮಾಜಮುಖಿಯಾದ ಕೆಲಸಗಳಲ್ಲಿ ಪಾಲ್ಗೊಳ್ಳಬೇಕೆಂಬ ಕಲ್ಪನೆಯನ್ನು ಹೊಂದಿದ್ದರು. ಪೂಜ್ಯರ ಕನಸ್ಸಿನ ಪೌರವಿಕವಾಗಿರುವ ಸಂದರ್ಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಶೋಷಿತ ಸಮುದಾಯಗಳನ್ನು ಮೇಲೆತ್ತುವ ಕಾರ್ಯಕ್ಕೆ ಮುಂದಾಗಿದೆ ಎನ್ನುವ ಮಾತು ಮಂಗಳೂರಿನ ಈ ವೇದಿಕೆಯಲ್ಲಿ ತಿಳಿಸಿಕೊಡುವುದು ಮುಖ್ಯವಾಗಿದೆ ಎಂದು ನುಡಿದರು.

ಪ್ರೀತಿಸುವ ವ್ಯಕ್ತಿತ್ವವನ್ನು ಕರುಣಿಸಿದ ಮಹಾಗುರು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು : ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ

ಬೆಳಗಾವಿ ಹಿರೇಮಠ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿ ಅನುಗ್ರಹ ಸಂದೇಶ ನೀಡಿ, ಬಾಲಗಂಗಾಧರನಾಥ ಸ್ವಾಮೀಜಿಯವರು ಕೇವಲ ಗುರುಗಳಾಗಿರದೆ, ತಾಯಿಯ ಒಲವು ನೀಡಿದ ಅಪರೂಪದ ಗುರುಗಳು. ಎಷ್ಟೇ ವಿದ್ಯಾವಂತರಾಗಿದ್ದರು ಎಲ್ಲರ ಹತ್ತಿರವಿದ್ದು, ಪ್ರೀತಿಸುವ ವ್ಯಕ್ತಿತ್ವವನ್ನು ಕರುಣಿಸಿದ ಮಹಾಗುರು ಶ್ರೀ ಡಾ ಬಾಲಗಂಗಾದರನಾಥ ಮಹಾಸ್ವಾಮೀಜಿಯವರು. ಮಹಾಸ್ವಾಮೀಜಿಯವರಿಂದ 25 ವರ್ಷದ ಹಿಂದೆ ಶ್ರಮಿಸಿದೆ ಪೂಜ್ಯ ಗುರುಗಳು ಸಂಕಲ್ಪಿಸಿದ ಪರಿಣಾಮ ಶಾಖಾ ಮಠ ಸ್ಥಾಪಿತಗೊಳ್ಳಲು ಕಾರಣವಾಗಿದೆ. ಶಾಖಾ ಮಠ ಬರಲು ಮೂಲ ಕಾರಣ ಭಕ್ತರು. ಭಕ್ತರು ಕೋರಿಕೆ ಎಲ್ಲಿ ಇರತ್ತೋ ಅಲ್ಲಿಗೆ ಸನ್ಯಾಸಿಗಳು ಹೋಗ್ಬೇಕು ಎಂಬುವುದು ಪೂಜ್ಯ ಗುರುಗಳ ಫಿಲೋಸಫಿಯಾಗಿದೆ. ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು, ಕಳೆದ 25 ವರ್ಷದ ಇತಿಮಿತಿಗಳ ಮಧ್ಯೆಗಳಲ್ಲಿ ಸಾಮಾಜಿಕವಾದಂತಹ ಸ್ಥರದ ಸೇವೆಯ ಕೈಂಕರ್ಯವನ್ನು ಮಠ ಮಾಡಿದೆ. ಅದಕ್ಕಾಗಿ ಇಂದು ಈ ದಿನವನ್ನು ಸಂಭ್ರಮಿಸುವ ನೆಪದಲ್ಲಿ ಸೇವಾ ಕ್ಷೇತ್ರವನ್ನು ಯೋಜಿಸುವ ಕಾರ್ಯಕ್ರಮ ಇಂದು ನಡೆದಿದೆ ಎಂದು ನುಡಿದರು.

ಚಿತ್ರದುರ್ಗ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಪರಮಪೂಜ್ಯ ಶ್ರೀ ಮಾದಾರ ಚನ್ನಯ ಮಹಾಸ್ವಾಮೀಜಿ ದಿವ್ಯ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ,  ಬಂಟ್ವಾಳ ಶಾಸಕ ರಾಜೇಶ್‍ ನಾಯ್ಕ್‍ ಮಾತನಾಡಿದರು. ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಸ್ವಾಗತಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಪಿ.ಎಸ್. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ್ ಪೈ ವಂದಿಸಿದರು.

ಕಾರ್ಯಕ್ರಮದಲ್ಲಿ ಗುರುವಂದನಾ ಹಾಗೂ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರಿಂದ ರಜತ ತುಲಾಭಾರ ನೆರವೇರಿತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top