ಪುತ್ತೂರು: ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ | ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ

ಮಂಗಳೂರು : ಆಧುನಿಕ ವಿದ್ಯೆಗೆ ಕೊರತೆ ಇಲ್ಲಾ, ನೂರು ವರ್ಷಗಳ ಹಿಂದೆ ದೇಶದಲ್ಲಿ ಸಾಕ್ಷರತೆ ಪ್ರಮಾಣ ಶೇ.5 ಇದ್ದು, ಇದೀಗ ಪ್ರಸ್ತುತ ದಿನಗಳಲ್ಲಿ ಶೇ.80 ಕ್ಕಿಂತಲೂ ಸಾಕ್ಷರತೆ ಸಿಗುತ್ತಿದೆ. ಆಧುನಿಕ ವಿದ್ಯೆಯ ಭರದಲ್ಲಿ ಸಿಲುಕಿ, ಆಧ್ಯಾತ್ಮಿಕ ವಿದ್ಯೆಯನ್ನು ಮರೆಯುತ್ತಿದ್ದೇವೆ ಎಂಬ ಭಯದ ಕಾಲಘಟ್ಟದಲ್ಲಿದ್ದೇವೆ ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಪರಮಪೂಜ್ಯ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.

ಅವರು ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಅಂಗವಾಗಿ ಮಂಗಳೂರಿನ ಕಾವೂರು ಬಿಜಿಎಸ್ ಪಿಯು ಕಾಲೇಜು ಆವರಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಧರ್ಮದ ತತ್ವಗಳು ಆಧುನಿಕತೆಗಾಗಲಿ, ಪ್ರಾಪಂಚಿಕ ಬದುಕಿಗೆ ಬೆನ್ನು ಮಾಡಿದಲ್ಲ. ಆಧುನಿಕವಾಗಿ ಸಮಾಜದಲ್ಲಿ ಬದುಬೇಕಾದರೆ ದೇಹ, ಮನಸ್ಸು ಮುಖ್ಯವಾಗಿದೆ. ನಮ್ಮ ದೇಹವನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಪೂರಕವಾದ ಸ್ವರೂಪದ ನೆಲೆಯನ್ನು ಕಟ್ಟಿಕೊಳ್ಳುವುದು ಮುಖ್ಯವಾಗಿರುತ್ತದೆ. ಸ್ವರೂಪದ ಜ್ಞಾನವನ್ನು ಪಡೆಯುವ ನಿಟ್ಟಿನಲ್ಲಿ ಹಲವಾರು ಬಂಧನಗಳಿಗೆ, ಕ್ಲೇಷಗಳಿಗೆ ಮನುಷ್ಯನ ಮನಸ್ಸು ಒಳಗಾಗಿದೆ. ಮನುಷ್ಯ ಕ್ಲೇಷಗಳಿಂದ ಮುಕ್ತಗೊಳ್ಳುವುದನ್ನು ಹಿರಿಯರು ವಿದ್ಯೆಯೆಂದಿದ್ದಾರೆ. ಇದಕ್ಕೆ ಪೂರಕವಾಗಿ ಆದಿಚುಂಚನಗಿರಿ ಮಹಾ ಸಂಸ್ಥಾನದ ಸಂಸ್ಥೆಗಳಲ್ಲಿ ಆಧುನಿಕ ವಿದ್ಯೆಯನ್ನು ನೀಡುವುದರ ಜೊತೆ ಆಧ್ಯಾತ್ಮಿಕ ವಿದ್ಯೆಯನ್ನು ನೀಡುವುದು ಪೂಜ್ಯ ಗುರುಗಳ ಆಸೆಯಂತೆ ನೆರವೇರಿದೆ ಎಂದು ನುಡಿದರು. ಮೊದಲೆಲ್ಲಾ ಆದ್ಯಾತ್ಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು, ಕಾಲ ಬದಲಾದಂತೆ ಆಧುನಿಕ ಯುಗಕ್ಕೆ ಒಗ್ಗಿಕೊಂಡು ಆಧ್ಯಾತ್ಮಿಕ ವಿದ್ಯೆಯನ್ನು ಕಡೆಗಣಿಸುವ ಸ್ಥಿತಿಗೆ ಸಮಾಜ ಮುಂದುವರೆದಿದೆ. ಆದಿಚುಂಚನಗಿರಿ ಸಂಸ್ಥೆಯು ಆಧುನಿಕ ಹಾಗೂ ಆದ್ಯಾತ್ಮಿಕ ವಿದ್ಯೆಗಳಿಗೆ ಒತ್ತನ್ನು ನೀಡಿ ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ದಾರಿ ದೀಪವಾಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಉದ್ದೇಶ ದೈಹಿಕವಾಗಿ, ಮಾನಸಿಕವಾಗಿ, ಬುದ್ದಿವಂತಿಕೆಗಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ. ಸಂಸ್ಕೃತಿ, ಸಾಂಸ್ಕೃತಿಕ, ಆದ್ಯಾತ್ಮಿಕ ವಿದ್ಯೆಯನ್ನು ನೀಡಿ ಪ್ರೋತ್ಸಾಹವನ್ನು ನೀಡಿದರೆ ಮನುಷ್ಯ ಪ್ರತಿಯೊಂದು ಸ್ತರದಲ್ಲಿ ತನ್ನನ್ನು ತಾನು ಅರ್ಥ ಮಾಡಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ ಎಂದು ನುಡಿದರು.































 
 

ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಆದಿಚುಂಚನಗಿರಿ ಮಹಾಸಂಸ್ಥಾನ ನಮ್ಮ ರಾಜ್ಯದಲ್ಲಿ ಶಿಕ್ಷಣದ ವಂಚಿತರಿಗೆ, ಶಿಕ್ಷಣದ ಅವಕಾಶ ಮಾಡಿಕೊಟ್ಟವರು ಪರಮಪೂಜ್ಯ ಶೀ ಬಾಲಗಂಗಾಧರ ಸ್ವಾಮೀಜಿ. ನಮ್ಮ ದೇಶದಲ್ಲಿರುವ ಹಿಂದುಳಿದ ಸಮುದಾಯಗಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಪೀಠ ಶಿಕ್ಷಣವನ್ನು ಅನ್ನದಾಸೋಹವನ್ನು ನೀಡುವ ಮೂಲಕ ಶಿಕ್ಷಣಕ್ಕೆ ಹೆಚ್ಚು ಆದ್ಯತೆಯನ್ನು ಬಾಲಗಂಗಾಧರ ಸ್ವಾಮೀಜಿಯವರು ನೀಡಿದ್ದಾರೆ. ಹಿಂದು ಸಮಾಜ ಶಶಕ್ತ ಸಮಾಜವಾಗಬೇಕು. ಹಿಂದು ಸಮಾಜಕ್ಕೆ ಧರ್ಮಯುತವಾದ, ಆದರ್ಶಯುತವಾದ, ಮೌಲ್ಯಯುತವಾದ ಶಿಕ್ಷಣ ಸಿಗಬೇಕು. ಧರ್ಮ ಆಧಾರಿತ ಸಂಸ್ಕಾರ, ಮೌಲ್ಯಾಧಾರಿತ ಗುಣ ಮಟ್ಟದ ಶಿಕ್ಷಣದಿಂದ ವ್ಯಕ್ತಿಯ ನಿರ್ಮಾಣದ ಪರಿಕಲ್ಪನೆಯಾಗಬೇಕು. ಶಿಕ್ಷಣ ಎಂಬುವುದು ಕೇವಲ ಸಮುದಾಯಕ್ಕೆ ಸೀಮಿತವಾಗದೆ, ಹಿಂದು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೆ ಶಿಕ್ಷಣ ಸಿಗಬೇಕೆಂದು, ಬಾಲಗಂಗಾಧರನಾಥ ಸ್ವಾಮಿಜಿಯ ಚಿಂತನೆಯಿಂದ ಜಿಲ್ಲೆಗಳಲ್ಲಿ ಮಠದ ಸ್ಥಾಪನೆಯಾಯಿತು. ಅತೀ ಹೆಚ್ಚು ಶಿಕ್ಷಣ ಸಂಸ್ಥೆಯನ್ನು ಹೊಂದಿರುವುದು ದಕ್ಷಿಣ ಕನ್ನಡ ಜಿಲ್ಲೆ, ಆದರೆ ಮೌಲ್ಯಯುತವಾದ ಶಿಕ್ಷಣವನ್ನು ನೀಡುವಲ್ಲಿ ಯಶಸ್ವಿಯಾದ್ದು, ಡಾ ಧರ್ಮಪಾಲನಾಥ ಸ್ವಾಮೀಜಿಯವರ ನೇತೃತ್ವದಿಂದ ಶ್ರೇಷ್ಟವಾದ ಶಿಕ್ಷಣ ಸಂಸ್ಥೆ ಬೆಳೆದಿದೆ. ಶಿಕ್ಷಣ ಸಂಸ್ಥೆಯ ಕಟ್ಟಡ ನಿರ್ಮಾಣವಾಗುವ ಮೊದಲು ಬಂಡೆಯ ನಗರವಾಗಿತ್ತು, ಬಂಡೆಯ ನಗರವಾಗಿದ್ದ ಸ್ಥಳವನ್ನು ಶೀ ಬಾಲಗಂಗಧರನಾಥ ಸ್ವಾಮಿಜಿಯ ಪರಿಕಲ್ಪನೆಯಿಂದ ಡಾ, ನಿರ್ಮಾಲನಂದನಾಥ ಸ್ವಾಮೀಜಿಯ ಮಾರ್ಗದರ್ಶನದಿಂದ , ಡಾ. ಧರ್ಮಪಾಲನಾಥ ಸ್ವಾಮೀಜಿಯ ಶ್ರಮದಿಂದ ಶಿಕ್ಷಣ ಕ್ಷೇತ್ರದ ಮಂದಿರವಾಗಿ ನಿಂತಿದೆ ಎಂದು ಹೇಳಿದರು.

ಮಂಗಳೂರು ಉತ್ತರ ಶಾಸಕ ಭರತ್ ವೈ. ಶೆಟ್ಟಿ ಮಾತನಾಡಿ, ದೇಶದಲ್ಲಿ ಆದಿಚುಂಚನಗಿರಿ ಮಠವು ಒಂದು ಲಕ್ಷಕ್ಕು ಹೆಚ್ಚು ವಿದ್ಯೆಯನ್ನು ನೀಡುವ ಕಾರ್ಯವನ್ನು ಮಾಡಿದೆ. ಹಿಂದು ಸಮಾಜದ ಗುರುಗಳು, ಮಠಾಧೀಶರು ವಿಜ್ಞಾನವನ್ನು ಒಪ್ಪಿಕೊಂಡು ಹಿಂದೂ ಸಮಾಜವನ್ನು ಬೆಳೆಸಿದ್ದಾರೆ, ಹಿಂದೂ ಸಮಾಜವು ವಿಜ್ಞಾನದಲ್ಲಾಗುವ ಪರಿವರ್ತನೆಗೆ ಒಗ್ಗೂಡಿಸಿಕೊಂಡು ಬಂದಿರುವ ಸಮಾಜವಾಗಿದೆ. ಬಿಜಿಎಸ್ ಸಂಸ್ಥೆಯಲ್ಲಿ ಮೆಟಾ ಫಿಸಿಕಲ್ ಎನ್ನುವ ವೈಜ್ಞಾನಿಕ ವಿಷಯನ್ನು ಪರಿಚಯಿಸಲಾಗಿದ್ದು, ಮೆಟಾ ಫಿಸಿಕಲ್ ವಿಷಯವು ಯುವ ಪೀಳಿಗೆಗೆ ತಿಳಿಸುವ ಮನಸ್ಥಿತಿಯಿಂದ ಆದ್ಯಾತ್ಮಿಕ ಚಿಂತನೆಯುಳ್ಳ ಮಠಧೀಶರು ನಮ್ಮ ಜೊತೆ ಇರುವುದು ಸಂತೋಷವಾಗಿದೆ. ಆದಿಚುಂಚನಗರಿಯ ವಿದ್ಯಾ ಸಂಸ್ಥೆಯಲ್ಲಿ ಧರ್ಮ, ಸಂಸ್ಕೃತಿ, ಸಂಸ್ಕಾರದೊಂದಿಗೆ ವಿಜ್ಞಾನದ ಚಿಂತನೆಯ ಮೂಲಕ ನೀಡಿದ ಹಿರಿಯರ ವೇದನೆಯನ್ನು ವಿದ್ಯಾರ್ಥಿಗಳ ಜೀವನದಲ್ಲಿ ಬೆಳೆಸುವಲ್ಲಿ ಆದಿಚುಂಚನಗಿರಿ ಮಠ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಂಗಳೂರು ಮಹಾನಗರ ಪಾಲಿಕೆ ಮಹಾಪೌರರಾದ ಮನೋಜ್ ಕುಮಾರ್ ಪಾಲ್ಗೊಂಡಿದ್ದರು.

ವೇದಿಕೆಯಲ್ಲಿ ವಿವಿಧ ಶಾಖಾ ಮಠದ ಎಲ್ಲಾ ಯತೀಶ್ರೇಷ್ಠರು, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಮಂಗಳೂರು ಶಾಖಾ ಮಠದ ಆಡಳಿತಾಧಿಕಾರಿ ಎ.ಟಿ.ಶಿವರಾಮ್, ಜಯಪ್ರಕಾಶ್ ಮಂಡ್ಯ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮೇ ಗೌಡ, ರಜತ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಸ್.ಪ್ರಕಾಶ್ ಉಪಸ್ಥಿತರಿದ್ದರು. ಶ್ರೀ ಮಠದ ಸಂಸ್ಕೃತ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು. ಬಿಜಿಎಸ್ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು.

ಬಿಜಿಎಸ್ ನ ಪ್ರಾಂಶುಪಾಲೆ ರೇಷ್ಮಾ ಸಿ. ನಾಯರ್ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಪ್ರಿಯಾ ಬಂಗೇರ ವಂದಿಸಿ, ನಿರೂಪಿಸಿದರು. ವಿವಿಧ ನೃತ್ಯ, ಗಾನ ವೈಭವಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top