ಉಡುಪಿ : ಹೊಸ ವರ್ಷಾಚರಣೆ ಸಂದರ್ಭದ ಪಾರ್ಟಿಗಳಲ್ಲಿ ಮಾರಾಟ ಮಾಡಲು ಕರಾವಳಿಗೆ ತಂದಿದ್ದ ಅಪಾರ ಪ್ರಮಾಣದ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಉಡುಪಿ ತಾಲೂಕು ಕೊರಂಗ್ರಪಾಡಿ ಗ್ರಾಮದ ಕೆಮ್ತೂರು ರೈಲ್ವೆ ಸೇತುವೆ ಬಳಿ ಕಾರಿನಲ್ಲಿ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅವರಿಂದ ಮಾದಕ ವಸ್ತು ಮತ್ತು ಕಾರಿನ ಸಹಿತ 20,11,900 ರೂ. ಮೌಲ್ಯದ ಸೊತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೋಟೆ ಗ್ರಾಮದ ಕಟಪಾಡಿ ಕಾಪು ನಿವಾಸಿ ಅಕ್ಬರ್ ಮುಹಮ್ಮದ್ ಬ್ಯಾರಿ (32) ಹಾಗೂ ಕಾಪು ಉಚ್ಚಿಲ ಬಡಾ ನಿವಾಸಿ ಎನ್.ಎಂ.ಮುಹಮ್ಮದ್ ಮುಕ್ದುಮ್ ಅಲಿ (28) ಬಂಧಿತರು. 69.127 ಗ್ರಾಂ ತೂಕದ ಎಂಡಿಎಂಎ, ಆರು ಮೊಬೈಲ್ ಫೋನ್, 1,100 ರೂಪಾಯಿ ನಗದು, ಕಾರು, ಲ್ಯಾಪ್‌ಟಾಪ್ ಮತ್ತು ಇತರ ಬೆಲೆಬಾಳುವ ವಸ್ತುಗಳು ವಶವಾಗಿವೆ.