ಪುತ್ತೂರು : ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿಯಾಗಿ ಸಂಜೀವ ಮಠಂದೂರು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ, ಪುತ್ತೂರು ತಾಲೂಕು, ಇದರ ಕೃಷಿಕ ಸಮಾಜ ನಿರ್ದೇಶಕರ ಚುನಾವಣೆಯಲ್ಲಿ ಅವಿರೋಧ ಸದಸ್ಯರಾಗಿ ಮಾಜಿ ಶಾಸಕ ಸಂಜೀವ ಮಠಂದೂರು, ವಿಜಯ್ ಕುಮಾರ್ ರೈ ಕೋರಂಗ, ವಿನೋದ್ ಕುಮಾರ್ ರೈ, ಮೂಲಚಂದ್ರ, ಎಪಿ ಸದಾಶಿವ, ಬಿ ಗೋವಿಂದ ಬೋರ್ಕರ್, ಎಂ ವೈ ರಾಮ ಪ್ರಸಾದ್, ಬಾಲಕೃಷ್ಣ ಕೆ, ದಯಾನಂದ ಕೆ, ಎಂ ದೇವಣ್ಣರೈ, ಡಿ. ವಿಜಯ ಕೃಷ್ಣ ಭಟ್, ಬಿಕೆ. ಎಸ್. ಸುಭ್ರಾಯ್ಯ ಶೆಟ್ಟಿ, ಎ. ವಿನೋದ್ ಕುಮಾರ್ ಶೆಟ್ಟಿ, ಸದಸ್ಯರಾಗಿ ಆಯ್ಕೆಗೊಂಡಿದ್ದು, ಈ ಪೈಕಿ ಒಬ್ಬರನ್ನು ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿಯಾಗಿ ಆಯ್ಕೆ ಮಾಡಲಾಗಿದೆ.
ಪುತ್ತೂರು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ವಿಜಯ ಕುಮಾರ್ ರೈ ಕೋರಂಗ, ಉಪಾಧ್ಯಕ್ಷರಾಗಿ ಎ. ಪಿ. ಸದಾಶಿವ, ಪ್ರಧಾನ ಕಾರ್ಯದರ್ಶಿಯಾಗಿ ಮೂಲಚಂದ್ರ, ಖಜಾಂಜಿಯಾಗಿ ಬಿ. ಗೋವಿಂದ ಬೋರ್ಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.