ಮೇಘಾಲಯ : ಈಶಾನ್ಯ ರಾಜ್ಯ ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಮಾಲಿನಾಂಗ್ ಗ್ರಾಮದ ಚರ್ಚ್ ಒಳಗೆ ಅಕ್ರಮವಾಗಿ ಪ್ರವೇಶಿಸಿ ವ್ಯಕ್ತಿಯೋರ್ವ “ಜೈ ಶ್ರೀರಾಮ್’ ಎಂದು ಘೋಷಣೆ ಹಾಕಿದ ಘಟನೆ ನಡೆದಿದೆ.
“ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಘೋಷಣೆ ಕೂಗಿದ್ದನ್ನು ಹರಿಬಿಟ್ಟಿದ್ದಾನೆ.
ಎಸ್‌ಪಿ ಸಿಲ್ವೆಸ್ಟರ್ ನಾನ್‌ಟೆಂಗರ್ ಮಾತನಾಡಿ “ಕೃತ್ಯವೆಸಗಿದ ವ್ಯಕ್ತಿಯನ್ನು ಆಕಾಶ್ ಸಾಗರ್ ಎಂದು ಗುರುತಿಸಲಾಗಿದೆ. ಆತ ಇನ್‌ಸ್ಟಾಗ್ರಾಂನಲ್ಲಿ ಘಟನೆಯ ಬಗ್ಗೆ ವಿವರಗಳನ್ನು ಅಪ್ ಲೋಡ್ ಮಾಡಿದ್ದಾನೆ ಎನ್ನಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಈ ಘಟನೆ ಸ್ಥಳೀಯರಿಗೆ ಆಘಾತವನ್ನುಂಟು ಮಾಡಿದ್ದು, ಮೇಘಾಲಯ ಸಿಎಂ ಕೊನ್ನಾಡ್ ಸಂಗ್ರಾ ಘಟನೆಯನ್ನು ಖಂಡಿಸಿದಲ್ಲದೆ, ತಪ್ಪಿತಸ್ಥನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ರಾಜ್ಯದಲ್ಲಿನ ಸೆಂಟ್ರಲ್ ಪೂಜಾ ಕಮಿಟಿ ಎಂಬ ಹಿಂದೂ ಸಂಘಟನೆಯ ಘೋಷಣೆ ಕೂಗಿದ್ದನ್ನು ಖಂಡಿಸಿದೆ.