ಮಂಗಳೂರು : ಕೌಟುಂಬಿಕ ಜೀವನದಲ್ಲಿ ಬಿರುಕು ಮೂಡಿದ ಪ್ರಕರಣದ ವಿಚ್ಚೆದನಕ್ಕೆ ಸಂಬಂದಿಸಿದಂತೆ ನ್ಯಾಯಲಯಕ್ಕೆ ಹಾಜರಾಗಿದ್ದ ಮಹಿಳೆಯನ್ನು ಹಿಂಬಾಲಿಸಿ ಬೆದರಿಸಿರುವ ಘಟನೆ ನಡೆದಿದೆ.
ಮಹಿಳೆಯನ್ನು ಹಿಂಬಾಲಿ ಬೆದರಿಸಿದ ಆರೋಪಿಯರಾದ ಯೋಗೀಶ್ ಮತ್ತು ಸಿಂಚನ್ ಕುಂದರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಮೊಬೈಲನ್ನು ಪರಿಶೀಲಿಸಿದಾಗ, ಮಹಿಳೆ ಹೋಗಿದ್ದ ಆಟೋವನ್ನು ಹಿಂಬಾಲಿಸಿ ತೆಗೆದ ಫೋಟೋಗಳು, ಮಹಿಳೆ ಕೋರ್ಟ್‌ನಲ್ಲಿ ಇದ್ದಾಗ ತೆಗೆದ ಫೋಟೋಗಳು, ಆಕೆಗೆ ಸಂಬಂಧಿಸಿದ ಇತರ ಫೋಟೋ ಹಾಗೂ ವೀಡಿಯೋಗಳು ಪತ್ತೆಯಾಗಿದೆ.
ಈ ವೇಳೆ ವಾಟ್ಸಾಪನ್ನು ಪರಿಶೀಲಿಸಿದಾಗ ಮಹಿಳೆಯ ಗಂಡ ಎಡ್ಕಂಡ್ ಫೆರ್ನಾಂಡಿಸ್, ಆರೋಪಿಯಲ್ಲಿ ಒಬ್ಬನಾಗಿರುವ ಯೋಗೀಶ್‌ನ ಜತೆ ನಡೆಸಿರುವ ಚಾಟಿಂಗ್ ಕೂಡಾ ಪತ್ತೆಯಾಗಿದೆ. ಅದರಲ್ಲಿ ಆತನಿಗೆ ಹಣ ಪಾವತಿ ಮಾಡಿರುವುದು, ಹಿಂಬಾಲಿಸಿಕೊಂಡು ಹೋಗುವಂತೆ ಸೂಚಿಸಿರುವ ಮಾಹಿತಿಗಳು ಕೂಡಾ ಪೊಲೀಸರಿಗೆ ಲಭ್ಯವಾಗಿದೆ. ಈ ಪ್ರಕರಣಕ್ಕೆ ಸಂಬಂದಿಸಿದಂತೆ ಬಂದರು ಠಾಣೆಯಲ್ಲಿ ದೂರು ದಾಖಲಾಗಿದೆ.