ಉಪ್ಪಳ: ಎಟಿಎಂ ಗೆ ಹಣ ತುಂಬಿಸಲೆಂದು ನಿಂತಿದ್ದ ವಾಹನದಿಂದ 50 ಲಕ್ಷ ರೂಗಳನ್ನು ಹಾಡುಹಗಲೇ ಅಪಹರಿಸಿ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ಪೋಲೀಸ್ ವರಿಷ್ಠರ ನಿರ್ದೇನದಂತೆ ವೇಷಪಲ್ಲಟಗೈದು ತನಿಖಾ ನಿರತರಾದ ಪೋಲಿಸ್ ತಂಡ ಆರೋಪಿಯನ್ನು ಬಂಧಿಸಿದ್ದು, ತಮಿಳುನಾಡು ತೃಚ್ಛಿ ರಾಂಜೀನಗರ ತಿರುಟ್ಟಾಗ್ರಾಮದ ಕಾರ್ವಣ್ರನ್ (28) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ.
ಕಳೆದ 2024 ಮಾರ್ಚ್ ತಿಂಗಳಲ್ಲಿ ಪ್ರಧಾನ ಆರೋಪಿ ಕಾರ್ವಣ್ರನ್ ತಮಿಳುನಾಡಿನ ತನ್ನೂರಿಗೆ ತಲುಪಿದ್ದಾನೆಂಬ ಸುಳಿವಿನ ಹಿನ್ನೆಲೆಯಲ್ಲಿ ವೇಷ ಮರೆಸಿ ತೆರಳಿದ ಪೋಲೀಸರು ಸಾಹಸಿಕವಾಗಿ ಸಿನಿಮೀಯ ರೀತಿಯಲ್ಲಿ ಆರೋಪಿಯನ್ನು ಬೆನ್ನಟ್ಟಿ ಸೆರೆಹಿಡಿದರು. ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಈ ಮೊದಲೇ ಬಂಧಿಸಲಾಗಿತ್ತು. ಬಂಧಿತನನ್ನು ಕಾಸರಗೋಡಿಗೆ ಕರೆ ತರಲಾಗಿದೆ.