ಪುತ್ತೂರು : ಹಿರೇಬಂಡಾಡಿ ಗ್ರಾಮ ಕರೆಂಕಿ ಎಂಬಲ್ಲಿ ಕಾಡಾನೆ ಸಂಚರಿಸಿದ್ದು, ಗ್ರಾಮಸ್ಥರು ಆತಂಕ ಪಟ್ಟಿದ್ದಾರೆ.
ಕಾಡಾನೆ ಸಂಚರಿಸಿದ ಹಿನ್ನಲೆ ಬೆಳಿಯಪ್ಪ ಗೌಡ ಜಾಲುರವರ ತೋಟದಲ್ಲಿ ತೆಂಗಿನ ಮರ ಮತ್ತು ಬಾಳೆಗಿಡಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅರಣ್ಯಾಧಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮ ವಹಿಸುವಂತೆ ತಿಳಿಸಿದ್ದಾರೆ.
ಗ್ರಾ.ಪಂ. ಮಾಜಿ ಸದಸ್ಯರಾದ ವಿಶ್ವನಾಥ ಕೆಮ್ಮಾಜೆ ಉಪಸ್ಥಿತರಿದ್ದರು.