ಕಾಂಗ್ರೆಸ್‌ಗೆ ಸಿಕ್ಕಿದ್ದು 289 ಕೋ. ರೂ. ಮಾತ್ರ
ಹೊಸದಿಲ್ಲಿ : 2023-24ನೇ ಹಣಕಾಸು ವರ್ಷದಲ್ಲಿ ಬಿಜೆಪಿಗೆ ಬರೋಬ್ಬರಿ 2,244 ಕೋಟಿ ರೂ. ದೇಣಿಗೆ ಹರಿದುಬಂದಿದೆ. ಇದೇ ವೇಳೆ ಕಂಗ್ರೆಸ್‌ಗೆ ಸಿಕ್ಕಿರುವುದು 289 ಕೋ. ರೂ. ದೇಣಿಗೆ. ಬಿಜೆಪಿ ತನ್ನ ಘಟಕಗಳು, ವ್ಯಕ್ತಿಗಳು, ಟ್ರಸ್ಟ್ ಮತ್ತು ಕಾರ್ಪೊರೇಟ್ ಕಂಪನಿಗಳಿಂದ 20 ಸಾವಿರ ರೂ.ಗಿಂತ ಅಧಿಕ ಮೊತ್ತದ ಒಟ್ಟು 2,244 ಕೋಟಿ ರೂ. ದೇಣಿಗೆ ಪಡೆದುಕೊಂಡಿದೆ.
ಭಾರತೀಯ ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪಕ್ಷಗಳು ನೀಡಿದ ಮಾಹಿತಿಯನ್ನು ಅಪ್ಲೋಡ್ ಮಾಡಿದೆ. 2022-23ರ ಹಣಕಾಸು ವರ್ಷದಲ್ಲಿ ಬಿಜೆಪಿ 719.85 ಕೋಟಿ ರೂ. ದೇಣಿಗೆ ಸ್ವೀಕರಿಸಿದ್ದರೆ ಕಾಂಗ್ರೆಸ್ 79.92 ಕೋಟಿ ರೂ. ಸ್ವೀಕರಿಸಿತ್ತು. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಬಿಜೆಪಿಗೆ ಸಿಕ್ಕಿದ ದೇಣಿಗೆ ಪ್ರಮಾಣ ಶೇ.212 ಏರಿಕೆಯಾಗಿದೆ.
ಬಿಜೆಪಿ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್‌ನಿಂದ 723.6 ಕೋಟಿ ರೂ. ದೇಣಿಗೆ ಪಡೆದಿದೆ. ಈ ಟ್ರಸ್ಟ್ ಕಾಂಗ್ರೆಸ್ ಪಕ್ಷಕ್ಕೆ 156.4 ಕೋಟಿ ರೂ. ದೇಣಿಗೆ ನೀಡಿದೆ. ಬಿಜೆಪಿ ಪಡೆದ ಒಟ್ಟು ದೇಣಿಗೆಯ ಮೂರನೇ ಒಂದರಷ್ಟು ಮತ್ತು ಕಾಂಗ್ರೆಸ್ ದೇಣಿಗೆಯ ಅರ್ಧದಷ್ಟು ಭಾಗ ಈ ಒಂದೇ ಟ್ರಸ್ಟ್‌ನಿಂದ ಬಂದಿರುವುದು ವಿಶೇಷ. ಪ್ರುಡೆಂಟ್ ಬಿಆರ್‌ಎಸ್ ಮತ್ತು ವೈಎಸ್‌ಆರ್‌ಪಿಸಿಗೆ ಕ್ರಮವಾಗಿ 85 ಕೋಟಿ ರೂ. ಮತ್ತು 62.5 ಕೋಟಿ ರೂ. ನೀಡಿದೆ. ಮೆಘಾ ಎಂಜಿನಿಯರಿಂಗ್ ಇನ್ಫ್ರಾ ಲಿಮಿಟೆಡ್, ಸೀರಂ ಇನ್‌ಸ್ಟಿಟ್ಯೂಟ್, ಆರ್ಸೆಲರ್ ಮಿತ್ತಲ್ ಗ್ರೂಪ್ ಮತ್ತು ಭಾರ್ತಿ ಏರ್‌ಟೆಲ್ ಸೇರಿವೆ. ಟ್ರಯಂಫ್ ಎಲೆಕ್ಟೋರಲ್ ಟ್ರಸ್ಟ್ 127 ಕೋಟಿ ರೂ., ಐಎಂಜಿ ಗಾರ್ಟಿಂಗ್ ಎಲೆಕ್ಟೋರಲ್ ಟ್ರಸ್ಟ್ 17.2 ಲಕ್ಷ ರೂ. ಹಣವನ್ನು ಬಿಜೆಪಿಗೆ ನೀಡಿದೆ. ಭಾರತದ ಲಾಟರಿ ಕಿಂಗ್ ಎಂದೇ ಹೆಸರುವಾಸಿಯಾಗಿರುವ ಸ್ಯಾಂಟಿಯಾಗೊ ಮಾರ್ಟಿನ್ ಒಡೆತನದ ಕಂಪನಿ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ 2023-24ರಲ್ಲಿ ಬಿಜೆಪಿಗೆ 3 ಕೋಟಿ ರೂ. ದೇಣಿಗೆ ನೀಡಿದೆ. ಫ್ಯೂಚರ್ ಗೇಮಿಂಗ್ ಚುನಾವಣಾ ಬಾಂಡ್‌ಗಳ ಮಾರ್ಗದ ಟಿಎಂಸಿಗೆ 1,610 ಕೋಟಿ ರೂ. ದೇಣಿಗೆ ನೀಡಿತ್ತು. ಸದ್ಯ ಸ್ಯಾಂಟಿಯಾಗೋ ಮಾರ್ಟಿನ್ ಒಡೆತನದ ಕಂಪನಿಗಳ ಮೇಲೆ ಇಡಿ ದಾಳಿ ನಡೆಸಿದ್ದು ತನಿಖೆ ನಡೆಯುತ್ತಿದೆ.
ಯಾವ ಪಕ್ಷಕ್ಕೆ ಎಷ್ಟು ಕೋಟಿ ರೂ.?
ಬಿಜೆಪಿ – 2244
ಬಿಆರ್‌ಎಸ್ – 580
ಕಾಂಗ್ರೆಸ್ -289
ವೈಎಸ್‌ಆರ್‌ಸಿಪಿ – 184
ಟಿಡಿಪಿ – 100
ಡಿಎಂಕೆ – 60
ಎಎಪಿ – 11
ಟಿಎಂಸಿ – 6