ಕೆದಿಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪೆರ್ನೆ ವಲಯದ ಕೆದಿಲ ಕಾರ್ಯಕ್ಷೇತ್ರದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಿಂದ ಸತ್ತಿಕ್ಕಲ್ಲಿನ ದ. ಕ. ಜಿ. ಪಂ. ಉ. ಹಿ. ಪ್ರಾಥಮಿಕ ಶಾಲೆಯ ಮಕ್ಕಳಿಗೆ 5 ಡೆಸ್ಕ್ ಮತ್ತು 5 ಬೆಂಚನ್ನು ನೀಡಲಾಯಿತು.
ಶಾಲಾ ಮುಖ್ಯೋಪಾಧ್ಯಯ ಮಂಜುನಾಥ ಮತ್ತು ಅಧ್ಯಾಪಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಿಯಾಝ್, ಉಪಾಧ್ಯಕ್ಷ ಶ್ವೇತರವರಿಗೆ ಪೆರ್ನೆ ವಲಯ ಮೇಲ್ವಿಚಾರಕಿ ಶಾರದಾ 5 ಡೆಸ್ಕ್ ಮತ್ತು 5 ಬೆಂಚನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕೆದಿಲ “ಬಿ” ಒಕ್ಕೂಟದ ಅಧ್ಯಕ್ಷೆ ಮೀನಾಕ್ಷಿ, ಉಪಾಧ್ಯಕ್ಷ ಸುಂದರ, ಸೇವಾ ಪ್ರತಿನಿಧಿ ಜಯಂತಿ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕೆದಿಲದ ಸದಸ್ಯರಾದ, ಜಗದೀಶ, ಗಿರೀಶ ಉಪಸ್ಥಿತರಿದ್ದರು.