ಕೌಡಿಚ್ಚಾರು : ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ

ಅರಿಯಡ್ಕ : ಶ್ರೀ ಅಯ್ಯಪ್ಪ ಸೇವಾ ಸಮಿತಿ ಕೌಡಿಚ್ಚಾರು ಅರಿಯಡ್ಕ ಇದರ ನೇತೃತ್ವದಲ್ಲಿ ಮತ್ತು ಶ್ರೀ ಕೃಷ್ಣ ಭಜನಾ ಮಂದಿರ (ರಿ) ಕೌಡಿಚ್ಚಾರು -ಅರಿಯಡ್ಕ ಇದರ ಸಹಕಾರದೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಡಿ 20 ರಂದು ವಿಜೃಂಭಣೆಯಿಂದ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು.

ಡಿ.20ರಂದು ಬೆಳಿಗ್ಗೆ ಗಣಪತಿ ಹೋಮ, ನಾಗ ತಂಬಿಲ, ಶ್ರೀ ಕೃಷ್ಣ ದೇವರಿಗೆ ವಿಶೇಷ ಪೂಜೆ ಪ್ರಾರ್ಥನೆ, ಭಜನಾ ಸಂಕೀರ್ತನೆ ನಡೆಯಿತು.

ಭವ್ಯ ಮೆರವಣಿಗೆ































 
 

ಶ್ರೀ ಅಯ್ಯಪ್ಪ ಭಜನ ಮಂದಿರ ಪೆರಿಗೇರಿಯವರ ಸಹಕಾರದೊಂದಿಗೆ ಶ್ರೀ ಅಯ್ಯಪ್ಪ ಭಜನ ಮಂದಿರದಲ್ಲಿ ವಿಶೇಷ ಪೂಜೆ ನಂತರ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, ಚೆಂಡೆ ವಾದನದೊಂದಿಗೆ ಹಾಲೆಮರದ ಕೊಂಬೆಯ ( ಪಾಲ್ ಕೊಂಬು) ಮೆರವಣಿಗೆ ನಡೆಯಿತು. ನೂರಾರು ಅಯ್ಯಪ್ಪ ವೃತಧಾರಿಗಳು , ಭಕ್ತಾದಿಗಳು ಅಯ್ಯಪ್ಪ ಶರಣಂ ಘೋಷಣೆಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಭಕ್ತಾದಿಗಳಿಗೆ ಸ್ವಾಗತ ನೀಡಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ  ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳಿಗೆ ಅನ್ನ ಪ್ರಸಾದ ವಿತರಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ

ಗಯಾಪದ ಕಲಾವಿದೆರ್ ಉಬಾರ್ ಪ್ರಸ್ತುತ ಪಡಿಸಿದ ತುಳು ನಾಟಕ ನಾಗ‌ ಮಾಣಿಕ್ಯ ನಡೆಯಿತು.

ವಿಶೇಷ ಧಾರ್ಮಿಕ ಕಾರ್ಯಕ್ರಮಗಳು

ಅಗ್ನಿ ಸ್ಪರ್ಶದ ಬಳಿಕ, ಅಪ್ಪ ಸೇವೆ ನಂತರ ಪ್ರಾತಃ ಕಾಲದಲ್ಲಿ ಶ್ರೀ ಸ್ವಾಮಿಯ ಅಗ್ನಿ ಸೇವೆ ನಡೆದು, ಕರ್ಪೂರಾರತಿ ಪ್ರಸಾದ ವಿತರಣೆ ನಡೆಯಿತು. ನೂರಾರು ಭಕ್ತಾದಿಗಳು ಭವ್ಯ ಕಾರ್ಯ ಕ್ರಮಕ್ಕೆ ಸಾಕ್ಷಿಯಾದರು.

ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ಇರುವುದರಿಂದ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ.ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದ‌ ಶಾಸಕಿ ಭಾಗೀರಥಿ ಮುರುಳ್ಯ  ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಅನ್ನದಾನ ಪ್ರಾಯೋಜಕತ್ವ ನೀಡಿದ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಶ್ರೀ ಕೃಷ್ಣ ಭಜನಾ ಮಂದಿರದ ಗೌರವಾಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ, ಪಾಲ್ ಕೊಂಬು ಸೇವಾರ್ಥಿಗಳಾದ ಸರೋಜಿನಿ ದೇವಪ್ಪ ಕುಲಾಲ್ ಕೌಡಿಚ್ಚಾರು, ಅಪ್ಪ ಸೇವೆಯ ಸೇವಾರ್ಥಿ ರಾಘವ ಪೂಜಾರಿ ಮರತ್ತಮೂಲೆ, ಅಗ್ನಿ ಸೇವೆಯ ಸೇವಾರ್ಥಿ ಮಾತೃ ಶ್ರೀ ಅರ್ಥ್ ಮೂವರ್ಸ್ ಕುಂಬ್ರ ಇದರ ಮಾಲಕ ಮೋಹನ ದಾಸ್ ರೈ, ಸಿಡಿ ಮದ್ದು ಸೇವಾರ್ಥಿ ಸಂತೋಷ್ ಮಂಡೆ ಕೋಲು, ಹೂವಿನಾಲಂಕಾರ ಸೇವಾರ್ಥಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಪೆ ಮಜಲು ಇದರ ಮುಖ್ಯೋಪಾಧ್ಯಾಯಿನಿ ಶಶಿಕಲಾ ಎಂ, ನಾಟಕ ಪ್ರಾಯೋಜಕತ್ವ ನೀಡಿದ ಶಿವ ಪ್ರಕಾಶ್ ಗೌಡ ಕೌಡಿಚ್ಚಾರು, ಕೊರಗಪ್ಪ ಗೌಡ ಮಡ್ಯಂಗಳ, ಕುಶಾಲಪ್ಪ ಗೌಡ ಮಡ್ಯಂಗಳ, ಬೃಜೇಶ್ ಕುಂಟಿಕಾನ, ನವೀನ್ ಕುಮಾರ್ ಬಸಿರಡ್ಕ, ರತನ್ ರೈ ಕುಂಬ್ರ, ಸಂದೀಪ್, ರಿತೇಶ್ ಗೌಡ ಕೌಡಿಚ್ಚಾರು, ರಘುನಾಥ್ ಕುಲಾಲ್ ಲಾಲಿತ್ಯ ಸ್ಟೋರ್ ಕೌಡಿಚ್ಚಾರು, ಚೆಂಡೆ ವಾದನ ಪ್ರಾಯೋಜಕತ್ವ ನೀಡಿದ ಸುಬ್ರಾಯ ಬಲ್ಯಾಯ ಮದ್ಲ, ಚಂದ್ರ ಶೇಖರ ಬಲ್ಯಾಯ ಮದ್ಲ, ಭಾಸ್ಕರ ಬಲ್ಯಾಯ ಮದ್ಲ, ಸೌಂಡ್ಸ್ ಮತ್ತು ಲೈಟಿಂಗ್ಸ್ ಪ್ರಾಯೋಜಕತ್ವ ನೀಡಿದ ಪದ್ಮನಾಭ ರೈ ಅರೆಪ್ಪಾಡಿ, ಸುಶಾಂತ್ ರೈ ಕುತ್ಯಾಡಿ, ಜನಾರ್ದನ ಬಳ್ಳಿಕಾನ, ಗಣೇಶ್ ಪೂಜಾರಿ  ಕೌಡಿಚ್ಚಾರು, ಪ್ರಮೋದ್ ಕುಮಾರ್ ರೈ  ಪುತ್ತೂರು, ರಮೇಶ್ ರೈ ಕಲ್ಲಡ್ಕ- ಕುಂಬ್ರ, ಜಗದೀಶ್ ಕುಲಾಲ್ ಪಾದಲಾಡಿ, ಮುಂತಾದವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಿತಿಯ, ಗೌರವಾಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ, ಗೌರವ ಸಲಹೆಗಾರರಾದ  ರಾಮದಾಸ್ ರೈ ಮದ್ಲ , ಮೋಹನ ದಾಸ್ ರೈ ಕುಂಬ್ರ, ಸದಾಶಿವ ಮಣಿಯಾಣಿ ಕುತ್ಯಾಡಿ, ಶ್ರೀನಿವಾಸ ಗೌಡ ಕನ್ನಯ, ಸಂತೋಷ್ ಮಣಿಯಾಣಿ ಕುತ್ಯಾಡಿ, ಮತ್ತು ತಿಲಕ್ ರೈ ಕುತ್ಯಾಡಿ, ಅಯ್ಯಪ್ಪ ಸೇವಾ ಸಮಿತಿಯ‌ ಅಧ್ಯಕ್ಷ ಬಾಬು ಟಿ, ಉಪಾಧ್ಯಕ್ಷ ಮೋಹನ, ಕಾರ್ಯ ದರ್ಶಿ ಪ್ರವೀಣ್ ಚೆನ್ನಾವರ, ಖಜಾಂಚಿ ದೇವಿ ಪ್ರಸಾದ್, ಗುರು ಸ್ವಾಮಿ ಬಾಬು ಕಲ್ಲಡ್ಕ, ಹಾಗೂ ಸಮಿತಿಯ ಸದಸ್ಯರು, ಶ್ರೀ ಕೃಷ್ಣ ಭಜನಾ ಮಂದಿರದ ಪದಾಧಿಕಾರಿಗಳು ಹಾಗೂ ಸದಸ್ಯರು, ಶ್ರೀ ಅಯ್ಯಪ್ಪ ಭಜನ ಮಂದಿರ ಪೆರಿಗೇರಿ‌ ಮತ್ತು ಯುವಕ ಮಂಡಲ‌ ಪೆರಿಗೇರಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೌಡಿಚ್ಚಾರು, ಸಾರ್ವಜನಿಕ ನಾಗನ ಕಟ್ಟೆ ಸಮಿತಿ ಕೌಡಿಚ್ಚಾರು,ವಾಹನ ಚಾಲಕ ಮಾಲಕರ ಸಂಘ ಕೌಡಿಚ್ಚಾರು,ವಿಜಯ ಗ್ರಾಮಾಭಿವೃದ್ಧಿ ಯೋಜನೆ ಅರಿಯಡ್ಕ,ಕೋಟಿ ಚೆನ್ನಯ ಗೆಳೆಯರ ಬಳಗ ರಿ ಪಾಪೆ ಮಜಲು ವಿವೇಕಾನಂದ ಯುವಕ ವೃಂದ ರಿ ಕೌಡಿಚ್ಚಾರು, ಮುತ್ತು ಮಾರಿಯಮ್ಮ ದೇವಸ್ಥಾನ ಕೌಡಿಚ್ಚಾರು, ರಾಮ ಕೃಷ್ಣ ಭಜನಾ ಮಂದಿರ ಕೌಡಿಚ್ಚಾರು,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅರಿಯಡ್ಕ ಒಕ್ಕೂಟ, ಹಿಂದೂ ಜಾಗರಣ ವೇದಿಕೆ ಕೌಡಿಚ್ಚಾರು, ಒಡಿಯೂರು ವಿಕಾಸ ವಾಹಿನಿ ಗ್ರಾಮಾಭಿವೃದ್ಧಿ ಯೋಜನೆ ಅರಿಯಡ್ಕ, ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಅರಿಯಡ್ಕ , ವೆಂಕಟ್ರಮಣ ಮಠ ಮಡ್ಯಂಗಳ ಸಹಕರಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top