ಬಳ್ಳಾರಿ : ಆಕಸ್ಮಿಕ ಬೆಂಕಿ ತಗುಲಿ ಮೂರು ಅಂಗಡಿಗಳು ಸುಟ್ಟು ಹೋಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್‌ನ ಜಿಂದಾಲ್ ಕಾರ್ಖಾನೆ ಬೈಪಾಸ್ ಬಳಿ ನಡೆದಿದೆ.
ಶಾಪ್, ಎಲೆಕ್ನಿಕಲ್ ಹಾಗೂ ಹೋಟೆಲ್ ಅಂಗಡಿಗಳಿಗೆ ಬೆಂಕಿ ತಗುಲಿದೆ. ಬೆಂಕಿಯ ಬಲೆಗೆ ಸಿಲುಕಿ ಅಂಗಡಿಯಲ್ಲಿದ್ದ ವಸ್ತುಗಳೆಲ್ಲಾ ಸುಟ್ಟು ಭಸ್ಮವಾಗಿದೆ. ಎಲೆಕ್ನಿಕ್ ಬ್ಯಾಟರಿಗಳು, ಎಲೆಕ್ನಿಕ್ ವಸ್ತುಗಳು ಹಾಗೂ ಹೋಟೆಲ್‌ನ ಫ್ರಿಜ್, ಟೇಬಲ್, ಚೇರ್ ಸೇರಿ ಒಟ್ಟು ಅಂದಾಜು 30 ಲಕ್ಷದ ವಸ್ತುಗಳಿಗೆ ಬೆಂಕಿ ತಗುಲಿದೆ ಎನ್ನಲಾಗಿದೆ.
ಬೆಂಕಿ ತಗುಲಿ ಸುತ್ತಲೆಲ್ಲಾ ಹೊಗೆ ತುಂಬಿದ್ದರಿಂದ ಸ್ಥಳೀಯರು ಕಂಗಾಲಾಗಿದ್ದು, ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟ್ರ ಲ್ಲಿ ಮೂರು ಅಂಗಡಿಗಳಿಗೆ ಬೆಂಕಿ ತಗುಲಿ ಆಹುತಿಯಾಗಿದೆ. ಘಟನಾನುಸಾರ ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.