ವಿವೇಕಾನಂದ ಕಾಲೇಜಿನಲ್ಲಿ ಉದ್ಯಮಶೀಲತೆಯಲ್ಲಿ ಯಶಸ್ಸು ಮಾಹಿತಿ ಕಾರ್ಯಾಗಾರ

ಪುತ್ತೂರು: ವಿವೇಕಾನಂದ ಕಲಾವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ (ಸ್ವಾಯತ್ತ)  ಸ್ನಾತಕೋತ್ತರ  ವಾಣಿಜ್ಯ ವಿಭಾಗ ಐಕ್ಯೂಎಸಿ, ಎಚ್ ಇಎಫ್ ಮಹಿಳಾ ಘಟಕ ಮತ್ತು ರೇಡಿಯೋ ಪಾಂಚಜನ್ಯದ  ಸಂಯುಕ್ತ ಆಶ್ರಯದಲ್ಲಿ ಉದ್ಯಮಶೀಲತೆಯಲ್ಲಿ ಯಶಸ್ಸು ಮಾಹಿತಿ ಕಾರ್ಯಗಾರ ಮತ್ತು ಸಂವಾದ ಕಾರ್ಯಕ್ರಮ ಪಿಜಿ ಸೆಮಿನಾರ್ ಹಾಲ್ ನಲ್ಲಿ ನಡೆಯಿತು.

ಸ್ನಾತಕೋತ್ತರ  ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಚ್. ಜಿ ಶ್ರೀಧರ್ ಕಾರ್ಯಾಗಾರ ಉದ್ಘಾಟಿಸಿದರು. ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ , ರವಿನಾರಾಯಣ ಎಂ, ಗಿರೀಶ್ ಎಂ, ಕೇಶವ ಪ್ರಸಾದ್ ಮುಳಿಯ,  ಎಚ್ ಇಎಫ್ ಮಹಿಳಾ ಘಟಕದ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ ಉಪಸ್ಥಿತರಿದ್ದರು.

ಅನನ್ಯ ಮತ್ತು ಪೂಜಶ್ರೀ ಪ್ರಾರ್ಥನೆ ಹಾಡಿದರು. ಮೇಘನಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.































 
 

 ಸಮಾರೋಪ ಸಮಾರಂಭ :

ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ , ಡಾ. ವಿಜಯ  ಸರಸ್ವತಿ ಡೀನ್   ಸ್ನಾತಕೋತ್ತರ ವಿಭಾಗ, ರವಿ ನಾರಾಯಣ ಎಂ , ಗಿರಿಶ್ ಎಂ, ಮೀರಾ ಮುರಲಿಧರ್, ಕೇಶವ ಪ್ರಸಾದ್ ಮುಳಿಯ, ಕೃಷ್ಣವೇಣಿ ಪ್ರಸಾದ್ ಮುಳಿಯ ಉಪಸ್ಥಿತರಿದ್ದರು. ನವೀನ್ ಕೃಷ್ಣ  ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಎಚ್ ಇಎಫ್ ಮಹಿಳಾ ಘಟಕದ ಕಾರ್ಯದರ್ಶಿ  ಮಹಾಲಕ್ಷ್ಮಿ ಕೆಮ್ಮಿಂಜೆ , ಶರಾವತಿ, ಉಮಾ ಡಿ. ಪ್ರಸನ್ನ, ಪ್ರಭಾವತಿ, ಎಚ್ ಇಎಫ್ ಅಧ್ಯಕ್ಷ ಸತೀಶ್ ರಾವ್ ಉಪಸ್ಥಿತ ರಿದ್ದರು

ಕಾರ್ಯಾಗಾರದಲ್ಲಿ  ಎಲೆಕ್ಟ್ರಿಕ್ ಉದ್ಯಮದ ಕುರಿತು ಉದ್ಯಮಿ ರವೀನಾರಾಯಣ ಮಾಹಿತಿ ನೀಡಿ, ಒಬ್ಬ ವ್ಯಕ್ತಿ ಒಂದು ಉದ್ಯಮ ಶುರು ಮಾಡಬೇಕೆಂದು ಅಂದುಕೊಂಡಾಗ ಆತನಿಗೆ ಆ ಉದ್ಯಮದ ಬಗ್ಗೆ ಅಷ್ಟು ಜ್ಞಾನವಿಲ್ಲದಿದ್ದರೂ ಆ ಉದ್ಯಮದ ಬಗ್ಗೆ ತಿಳಿದಿರುವವರನ್ನು ಒಟ್ಟುಗೂಡಿಸಿಕೊಂಡು  ಉದ್ಯಮವನ್ನು ಪ್ರಾರಂಭಿಸಬಹುದು ಎಂದು ಹೇಳಿದರು. ತನುಜಾ ಕಾರ್ಯಕ್ರಮ ನಿರೂಪಿಸಿದರು.

ಗಿರೀಶ್ ಎಂ. ಅವರು ಆಹಾರೋದ್ಯಮದ ಬಗ್ಗೆ ಮಾಹಿತಿ ಕಾರ್ಯಗಾರ ನಡೆಸಿ, ಆಹಾರ ಉದ್ಯಮದಲ್ಲಿ ಸಂತೃಪ್ತಿ ಹೋಟೆಲನ್ನು ಅವರು ಆರಂಭಿಸಿದರು, ಈ ಹೋಟೆಲಿನ ಬಗ್ಗೆಯೂ ತಮ್ಮ ಅವಧಿಯಲ್ಲಿ ಗಿರೀಶ್ ಇವರು ಹೇಳಿದ್ದಾರೆ. ಜೊತೆಗೆ ಹೋಟೆಲಿನ ಉದ್ಯಮದಲ್ಲಿ ಇರುವಂತಹ ಕಷ್ಟಗಳು ಅದರ ಜೊತೆಗೆ ಬೇರೆ ಹೋಟೆಲುಗಳ ಪೈಪೋಟಿಯನ್ನು ಹೇಗೇ ಎದುರಿಸಬೇಕೆಂಬುದನ್ನು ಕೂಡ ತಿಳಿಸಿದದರು. ನೀಹಾ ಕಾರ್ಯಕ್ರಮ ನಿರೂಪಿಸಿದರು.

ಮೀರಾ ಮುರಲೀಧರ್ ಸಂವಾದ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ, ತಾವು ಪ್ರಾರಂಭಿಸಿದ ಕಂಪನಿಯ ಬಗ್ಗೆ ತಿಳಿಸಿದ್ದಾರೆ, ಇವರು ಅಗತ್ಯವಿರುವ ಗಿಡಮೂಲಿಕೆ ಔಷಧಿಯ ಸಸ್ಯಗಳನ್ನು ಬೆಳೆಸಿ, ಅದರಿಂದ ಗಿಡಮೂಲಿಕ ಉತ್ಪನ್ನಗಳನ್ನು  ತಯಾರಿಸಿದ್ದಾರೆ. ಇದರೊಂದಿಗೆ ಸತ್ವಂ ಎಂಬ ಹರ್ಬಲ್ ಮಿನರಲ್ ವಾಟರ್ ಕೂಡ ಇವರ ಸಂಸ್ಥೆಯ ಉತ್ಪನ್ನ. ಇವರು ತಮ್ಮ ಸಾಧನೆಯಲ್ಲಿ ತಮ್ಮ ಮನೆಯವರ ಸಹಕಾರವನ್ನು ಕೂಡ ನೆನಪಿಸಿಕೊಂಡರು.

ಕೇಶವ ಪ್ರಸಾದ್ ಮುಳಿಯ  ಅವರು ಆಭರಣ ಮತ್ತು ಇತರ ಉದ್ಯಮಗಳ ಬಗ್ಗೆ ಮಾಹಿತಿ ಕಾರ್ಯಗಾರವನ್ನು ನಡೆಸಿ,  ಇವರ ಅವಧಿಯಲ್ಲಿ ತಮ್ಮ ಸಂಸ್ಥೆಯಾದ ಮುಳಿಯ ಜುವೆಲರ್ಸ್ ನ ಆರಂಭದಿಂದ ಹಿಡಿದು ಈಗ ಅದು ಯಾವ ರೀತಿಯಲ್ಲಿ ನಡೆದುಕೊಂಡು ಹೋಗುತ್ತಾ ಇದೆ ಮತ್ತು ಸಂಸ್ಥೆ ಹೊಂದಿರುವ ಶಾಖೆಗಳ ಬಗ್ಗೆ ತಿಳಿಸಿದರು.  ಜೊತೆಗೆ ತಮ್ಮ ಸಂಸ್ಥೆಯು ಉದ್ಯೋಗಿಗಳಿಗೆ ಸ್ವಂತ ನಿವೇಶನದ ಅವಶ್ಯಕತೆ ಇದ್ದಾಗ  find the need and fill the gap ಎಂಬಂತೆ  ಮುಳಿಯ ಪ್ರಾಪರ್ಟೀಸ್ ನ  ಉಗಮಕ್ಕೆ ಕಾರಣವಾದ ರೋಚಕ ವಿಚಾರವನ್ನು ತಿಳಿಸಿದರು. ನವೀನ್ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top