ಮುಲ್ಕಿ: ಹಳೆಯಂಗಡಿ ರೈಲ್ವೇ ಗೇಟ್ ಬಳಿ ರೈಲು ಬರುವ ಕೆಲವೇ ಹೊತ್ತಲ್ಲಿ ಪಿಕಪ್ ವಾಹನ ಚಾಲಕನ ನಿರ್ಲಕ್ಷ್ಯತನದಿಂದ ರೈಲ್ವೇ ಗೇಟ್ ಗೆ ಡಿಕ್ಕಿಯಾದ ಘಟನೆ ನಡೆದಿದೆ.
ಡಿಕ್ಕಿಯಾದ ಪರಿಣಾಮ ರೈಲ್ವೆ ಗೇಟ್ ತುಂಡಾಗಿದ್ದು. ಯಾವುದೇ ರೀತಿಯ ಪ್ರಾಣಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ರೈಲ್ವೇ ಗೇಟ್ ಸಿಬ್ಬಂದಿ ರೈಲು ಬರುವ ಹೊತ್ತಿನಲ್ಲಿ ಗೇಟ್ ಹಾಕಲು ಮುಂದಾಗುವ ವೇಳೆ ಕಿನ್ನಿಗೋಳಿ ಕಡೆಯಿಂದ ಹಳೆಯಂಗಡಿ ಕಡೆಗೆ ಹೋಗುತ್ತಿದ್ದ ಪಿಕಪ್ ವಾಹನ ಇಂದ್ರ ನಗರ ರೈಲ್ವೇ ಗೇಟ್ ತಲುಪುತ್ತಿದ್ದಂತೆ ಪಿಕಪ್ ಚಾಲಕ ಆತುರವಾಗಿ ಗೇಟ್ ಮೂಲಕ ನುಗ್ಗಿಸಲು ಯತ್ನಿಸಿದಾಗ ಗೇಟ್ ತುಂಡಾಗಿದೆ ಎಂದು ತಿಳಿದು ಬಂದಿದೆ.
ತಕ್ಷಣ ರೈಲ್ವೇ ಗೇಟ್ ಸಿಬ್ಬಂದಿ ತಾತ್ಕಾಲಿಕ ನೆಲೆಯಲ್ಲಿ ಕಬ್ಬಿಣದ ರಾಡ್ ಗಳನ್ನು ಅಳವಡಿಸಿ ಗೇಟ್ ಬಳಿ ರಕ್ಷಣೆಯ ಕಾರ್ಯಾಚರಣೆ ನಡೆಸಿದ್ದಾರೆ.
ಬಳಿಕ ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪಿಕಪ್ ಚಾಲಕನ ವಿರುದ್ಧ ದೂರು ದಾಖಲಾಗಿದೆ.