ಮುಂಬಯಿ : ತನ್ನ ಬಾಸ್ ಜತೆ ಮಲಗಲು ಒಪ್ಪದ ಎರಡನೇ ಹೆಂಡತಿಗೆ ಗಂಡ ತ್ರಿವಳಿ ತಲಾಕ್ ನೀಡಿದ ಘಟನೆ ಮುಂಬಯಿ ಸಮೀಪ ಕಲ್ಯಾಣ್‌ನಲ್ಲಿ ಸಂಭವಿಸಿದ್ದು, ಗಂಡನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡಿಸೆಂಬರ್ 19ರಂದು ಕಂಪನಿಯ ಪಾರ್ಟಿ ನಡೆದಿದ್ದು, ಇದಕ್ಕೆ ಆರೋಪಿ 45 ವರ್ಷದ ವ್ಯಕ್ತಿ ತನ್ನ 28 ವರ್ಷದ ಎರಡನೇ ಹೆಂಡತಿಯನ್ನು ಕರೆದುಕೊಂಡು ಹೋಗಿದ್ದ. ಪಾರ್ಟಿಯ ಮಧ್ಯೆ ಈತ ಬಾಸ್ ಜೊತೆಗೆ ಹೋಗುವಂತೆ ಹೆಂಡತಿಗೆ ಹೇಳಿದ್ದಾನೆ. ಇದಕ್ಕೆ ಆಕೆ ಒಪ್ಪಿರಲಿಲ್ಲ. ಮನೆಗೆ ಬಂದ ಕೂಡಲೇ ಈ ಕುರಿತು ಜಗಳವಾಡಿ ಹೆಂಡತಿಗೆ ಮೂರು ಸಲ ತಲಾಕ್ ಹೇಳಿದ್ದಾನೆ.
ಮೊದಲ ಹೆಂಡತಿಗೆ ಡೈವೋರ್ಸ್ ಕೊಡಲು 15 ಲಕ್ಷ ರೂ. ಖರ್ಚು ಆಗಿದೆ. ಅದನ್ನು ತವರು ಮನೆಯಿಂದ ತಂದುಕೊಡು ಎಂದು ಹೆಂಡತಿಗೆ ಹಿಂಸೆ ನೀಡಿದ್ದ. ಹೆಂಡತಿ ಇದಕ್ಕೂ ಬಗ್ಗದಿದ್ದಾಗ ತಲಾಕ್ ಹೇಳಿದ್ದಾನೆ. ಆರೋಪಿಯ ವಿರುದ್ಧ ರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2), 351(2), 351(3) ಮತ್ತು 352 ಮತ್ತು ಮುಸ್ಲಿಂ ಮಹಿಳೆಯರ (ಮದುವೆಯ ಹಕ್ಕುಗಳ ರಕ್ಷಣೆ) ಕಾಯ್ದೆ, 2019 ರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳೆದ ಜನವರಿಯಲ್ಲಷ್ಟೇ ಅವರ ಮದುವೆಯಾತ್ತು. ಗಂಡ ಆರಂಭದಲ್ಲಿ ಕೆಲವು ತಿಂಗಳು ಗಂಡ ಅನ್ಯೋನ್ಯವಾಗಿದ್ದ, ಬಳಿಕ ವರದಕ್ಷಿಣೆಗಾಗಿ ಕಿರುಕುಳ ಪ್ರಾರಂಭಿಸಿದ್ದ. ತನ್ನ ಬಾಸ್ ಜೊತೆ ಮಲಗಲು ನಿರಾಕರಿಸಿದ್ದಕ್ಕೆ ಹೆಂಡತಿಗೆ ದೈಹಿಕ ಕಿರುಕುಳ ನೀಡಿದ್ದಾನೆ. ಬಳಿಕ ತಲಾಕ್ ನೀಡಿ ಮನೆಯಿಂದ ಹೊರ ಹಾಕಿದ್ದಾನೆ. ಈ ಕುರಿತು ಹೆಂಡತಿ ನೀಡಿದ ದೂರಿನ ಪ್ರಕಾರ ಕಲ್ಯಾಣ್‌ನ ಬಜಾರ್‌ಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.