ಬೆಳ್ತಂಗಡಿ : ಕಾಡಿಗೆ ಸೊಪ್ಪು ತರಲು ಹೋದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಮಾಲ್ಯಳ ಕಾಡಿನಲ್ಲಿ ನಡೆದಿದೆ.
ಪೊದಿಂಬಿಲ ನಿವಾಸಿ ರಾಜೇಶ್ ಆಚಾರ್ಯ (36) ಮೃತಪಟ್ಟವರು.
ಸೋಮವಾರ ಮಾಲ್ಯಳ ಕಾಡಿಗೆ ಮಕ್ಕಳಿಗೆ ಮದ್ದಿನ ಸೊಪ್ಪು ತರಲು ಹೋದ ವ್ಯಕ್ತಿ ವಾಪಾಸು ಮನೆಗೆ ಬಾರದ ಹಿನ್ನಲೆಯಲ್ಲಿ ಮನೆಯವರು ಮತ್ತು ಸಾರ್ವಜನಿಕರು ಹುಡುಕಾಟ ನಡೆಸಿದಾಗ ಕಲ್ಲಿನ ಸೆರೆಯಲ್ಲಿ ಸಿಲುಕಿದ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತರು ತಂದೆ ಆನಂದ ಆಚಾರ್ಯ ಅವರನ್ನು ಅಗಲಿದ್ದಾರೆ.
ಮೃತರು ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿ ಬೆಳ್ಳಿಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಧರ್ಮಸ್ಥಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.