ಪುತ್ತೂರು : 2ನೇ ಬಾರಿಗೆ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಾ.ಕೆ.ವಿ.ರೇಣುಕಾ ಪ್ರಸಾದ್ ಅವರಿಗೆ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಕೆ.ವಿ.ರೇಣುಕಾ ಪ್ರಸಾದ್ ಮಾತನಾಡಿ, ಮೂರು ವರ್ಷದ ಹಿಂದೆ ಐದು ಮಂದಿ ನಿರ್ದೇಶಕರ ಮೂಲಕ ನನ್ನ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡು ಈ ವರೆಗೆ ಬಹಳ ಉತ್ತಮ ಕಾರ್ಯವನ್ನು ಮಾಡುತ್ತಿದೆ. ಐದು ಮಂದಿ ಪ್ರಾರಂಭಿಸಿದ ಪ್ರೇರಣಾ ಸಂಸ್ಥೆಗೆ ನನ್ನಿಂದಾಗುವ ಹಾಗೂ ರಾಜ್ಯ ಒಕ್ಕಲಿಗ ಸಂಘದಿಂದ ನೀಡುವ ಎಲ್ಲಾ ಸಹಕಾರವನ್ನು ನೀಡುತ್ತೇನೆ. ಪ್ರೇರಣಾ ಸಂಸ್ಥೆ ಅನೇಕ ವಿದ್ಯಾರ್ಥಿಗಳಿಗೆ ದಾರಿದೀಪವಾಗಿ ಬೆಳೆದು ಬಂದಿದೆ ಎಂದರು.
ಈ ಸಂದರ್ಭದಲ್ಲಿ ಪ್ರೇರಣಾ ಸಂಸ್ಥೆಯ ನಿರ್ದೇಶಕ ಮಂಡಳಿ ರಾಜ್ಯ ಒಕ್ಕಲಿಗ ಸಂಘದಿಂದ ಸಹಕಾರ ನೀಡುವರೇ ಎಂದು ವಿನಂತಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೇರಣಾ ಸಂಸ್ಥೆಯ ಆಡಳಿತ ನಿರ್ದೇಶಕರಾದ ಮುರಳೀಧರ ಕೆ.ಎಲ್., ಕಾರ್ಯನಿರ್ವಾಹಕ ನಿರ್ದೇಶಕಿ ಮೋಕ್ಷಿತಾ ಮಿಥುನ್, ನಿರ್ದೇಶಕರಾದ ಪ್ರವೀಣ್ ಕುಂಟ್ಯಾನ, ನಾಗೇಶ್ ಕೆಡೆಂಜಿ, ವಸಂತ ವೀರಮಂಗಲ, ಗೌರವ ಸಲಹೆಗಾರ ಸೀತಾರಾಮ ಕೇವಳ, ಪ್ರೇರಣಾ ಸಂಸ್ಥೆಯ ಪ್ರಬಂಧಕಿ ದಯಾಮಣಿ, ಪ್ರೇರಣಾ ಸಂಸ್ಥೆ ಹಾಗೂ ನ್ಯೂಸ್ ಪುತ್ತೂರಿನ ಸಿಬ್ಬಂದಿ ಉಪಸ್ಥಿತರಿದ್ದರು.