ಸೈಬರ್‌ ವಂಚಕರಿಗೆ 500 ಸಿಮ್‌ಕಾರ್ಡ್‌ ಪೂರೈಸಿದವ ಸೆರೆ

ಆನ್‌ಲೈನ್‌ ವಂಚನೆ ಪ್ರಕರಣಗಳ ತನಿಖೆಯಲ್ಲಿ ಮಂಗಳೂರು ಪೊಲೀಸರ ಮಹತ್ವದ ಸಾಧನೆ

ಮಂಗಳೂರು: ಸೈಬರ್​ ವಂಚಕರಿಗೆ 500ಕ್ಕೂ ಅಧಿಕ ಸಿಮ್‌ಕಾರ್ಡ್‌ಗಳನ್ನು ಪೂರೈಕೆ ಮಾಡಿದ್ದ ವಂಚಕನೊಬ್ಬನನ್ನು ಮಂಗಳೂರು ಪೊಲೀಸರು ದಿಲ್ಲಿಯಲ್ಲಿ ಬಂಧಿಸಿದ್ದಾರೆ. ಮಂಗಳೂರಿನ ಸೆನ್ ಕ್ರೈಂ ಪೊಲೀಸರ ಕೈಗೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ವಂಚಕ ಸಿಕ್ಕಿಬಿದ್ದಿದ್ದಾನೆ. ಅವನನ್ನು ಒಡಿಶಾ ಮೂಲದ ಕಣಾತಲ ವಾಸುದೇವ ರೆಡ್ಡಿ (25) ಎಂದು ಗುರುತಿಸಲಾಗಿದೆ.

ಸೈಬರ್ ವಂಚನೆ ಪ್ರಕರಣದ ತನಿಖೆ ನಡೆಸುತ್ತಿದ್ದ ವೇಳೆ ಕಣಾತಲ ವಾಸುದೇವ ರೆಡ್ಡಿ ಸಿಮ್ ಪೂರೈಕೆ ಮಾಹಿತಿ ಮಂಗಳೂರಿನ ಸೆನ್ ಪೊಲೀಸರಿಗೆ ಸಿಕ್ಕಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕಣಾತಲ ವಾಸುದೇವ ರೆಡ್ಡಿ ಬಂಧನಕ್ಕೆ ಬಲೆಬೀಸಿದ್ದರು. ವಂಚಕ ನಡವೂಲು ವೀರವೆಂಕಟ ಸತ್ಯನಾರಾಯಣ ರಾಜು ಎಂಬುವನು ಹಣ ವಿನಿಯೋಗಿಸಲು ವಾಟ್ಸಾಪ್​ ಮೂಲಕ ನಕಲಿ ಲಿಂಕ್ ಕಳುಹಿಸಿ ಲಕ್ಷಾಂತರ ರೂ. ಲಪಟಾಯಿಸಿದ್ದನು. ಹಂತ ಹಂತವಾಗಿ 10,84,017 ರೂಪಾಯಿ ಪಡೆದು ವಂಚನೆ ಎಸಗಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಸೈಬರ್​ ವಂಚಕ ನಡವೂಲು ವೀರವೆಂಕಟ ಸತ್ಯನಾರಾಯಣ ರಾಜುನನ್ನು ಬಂಧಿಸಿದ್ದಾರೆ. ಅವನನ್ನು ವಿಚಾರಣೆಗೆ ಒಳಪಡಿಸಿದಾಗ ಸಿಮ್ ಮಾರಾಟ ದಂಧೆಯ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಕೂಡಲೇ ಪೊಲೀಸರು ಕಣಾತಲ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಿದ್ದರು. ಕಣಾತಲ ದುಬೈಗೆ ತೆರಳು ದಿಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಇಲ್ಲಿನ ಇಮಿಗ್ರೇಶನ್ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದರು. ಇನ್ನುಳಿದ ಆರೋಪಿಗಳ ಪತ್ತೆಗೆ ಮಂಗಳೂರು ಪೊಲೀಸರಿಂದ ತನಿಖೆ ಮುಂದುವರಿದಿದೆ.































 
 

ಮೂಡುಬಿದಿರೆ ನಿವಾಸಿಯೊಬ್ಬರು‌ ಸೈಬರ್ ವಂಚನೆ ಬಗ್ಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ಹಣ ವರ್ಗಾವಣೆಯಾದ ಖಾತೆಯನ್ನು ಫ್ರೀಝ್ ಮಾಡಿದ್ದೇವು. 9,50,000 ಹಣವನ್ನು ನಾವು ಪ್ರೀಝ್ ಮಾಡಿದ್ದೇವೆ. ಕೇರಳ ಮತ್ತು‌ ಗುಜರಾತ್ ಮೂಲದ ಎರಡು ಖಾತೆಗಳಿಗೆ ಹಣ ವರ್ಗಾವಣೆಯಾಗಿತ್ತು. ಟೆಕ್ನಿಕಲ್ ವಿಚಾರಣೆ ಸಂದರ್ಭದಲ್ಲಿ ಸಿಮ್‌ಕಾರ್ಡ್ ಬಗ್ಗೆ ಮಾಹಿತಿ ಗೊತ್ತಾಯಿತು. ವಿಶಾಖಪಟ್ಟಣ ಮತ್ತು ಗೋಧಾವರಿ ಪ್ರದೇಶದಿಂದ‌ ಸಿಮ್‌ಕಾರ್ಡ್ ನೀಡಿರುವುದು ತಿಳಿಯಿತು. ನಮ್ಮ ಒಂದು ತಂಡ ಆಂಧ್ರಪ್ರದೇಶದ ಗೋದಾವರಿಗೆ ತೆರಳಿ‌ ಸತ್ಯನಾರಾಯಣ ರಾಜು ಎಂಬಾತನನ್ನು ಬಂಧಿಸಿದೆ. ಆತನಿಂದ 300ಕ್ಕೂ ಹೆಚ್ಚು ಸಿಮ್​ಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅರ್ಗವಾಲ್ ತಿಳಿಸಿದ್ದಾರೆ.

ಸತ್ಯನಾರಾಯಣ ರಾಜು ಬೇರೆ ಬೇರೆಯವರ ಹೆಸರಿನಲ್ಲಿ ಸಿಮ್‌ಕಾರ್ಡ್ ಪಡೆದು ದುಬೈನಲ್ಲಿದ್ದ ವಿನ್ಸೆಕ್ಟ್ ಎಂಬ ಕಂಪನಿಗೆ ಈ ಸಿಮ್ ಪೂರೈಸುತ್ತಿದ್ದನು. ಪ್ರಾಥಮಿಕ ಮಾಹಿತಿ ಪ್ರಕಾರ ಇದು ಚೀನ ಮೂಲದ ಕಂಪನಿಯೆಂದು ಗೊತ್ತಾಗಿದೆ. ದುಬೈನಲ್ಲಿ ಕಾಲ್‌ಸೆಂಟರ್ ತೆರೆದು ಜನರಿಗೆ ಸ್ಟಾಕ್ ಮಾರ್ಕೆಟ್‌ನಲ್ಲಿ ಇನ್ವೆಸ್ಟ್ ಮಾಡಿ ಎಂದು ಹೇಳಿ ವಂಚನೆ ಮಾಡುತ್ತಿದ್ದರು.
ಸತ್ಯನಾರಾಯಣ ರಾಜು ವಿಚಾರಣೆ ವೇಳೆ ಮುತ್ತು ಶಿವ ಮತ್ತು ಕಣಾತಲ ವಾಸುದೇವ ರೆಡ್ಡಿ ಎಂಬ ಇಬ್ಬರ ಹೆಸರು‌ ಬಾಯಿಬಿಟ್ಟಿದ್ದನು. ಇವರಿಬ್ಬರು ದುಬೈನಲ್ಲಿ ಆಪರೇಟರ್ ಮಾಡುತ್ತಿದ್ದರು. ಇಬ್ಬರ ಸಂಪೂರ್ಣ ಮಾಹಿತಿ ಪಡೆದು ಲುಕ್‌ಔಟ್ ನೋಟೀಸ್ ಜಾರಿ ಮಾಡಿದ್ದೇವು. ಲುಕ್​ಔಟ್​ ಜಾರಿ ಬಳಿಕ‌ ಮುತ್ತು ಶಿವನನ್ನು ಮೂರು ತಿಂಗಳ ಹಿಂದೆ ಬಂಧಿಸಿದ್ದೆವು. ಎರಡು‌ ದಿನದ ಹಿಂದೆ ದಿಲ್ಲಿಯಿಂದ ದುಬೈಗೆ ಹೋಗುವಾಗ ವಾಸುದೇವ ರೆಡ್ಡಿಯನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top