ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‍ ನಲ್ಲಿ ವಜ್ರಾಭರಣಗಳ ಉತ್ಸವ “ಗ್ಲೋ ಫೆಸ್ಟ್” ಗೆ ಚಾಲನೆ

ಪುತ್ತೂರು: ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ ನಲ್ಲಿ ಡಿ.23 ರಿಂದ ಜ.26 ರ ವರೆಗೆ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ ಗ್ಲೋ ಫೆಸ್ಟ್ ಅಯೋಜಿಸಲಾಗಿದೆ.

ಸಮಾರಂಭವನ್ನು ಗಣೇಶ್ ಟ್ರೇಡರ್‍ಸ್ ಮಾಲಕ ವಾಮನ ಪೈ ಅವರ ಪತ್ನಿ ಅನುರಾಧ ವಾಮನ ಪೈ, ದಕ್ಷ ಕನ್ಸಲ್ಟೇನ್ಸಿ ಮಾಲಕ ಉಷಾ ರವೀಂದ್ರ, ಸ್ನೇಹಾ ಟೆಕ್ಸ್‌ಟೈಲ್ಸ್‌ನ ಮಾಲಕ ಸತೀಶ್ ಅವರ ಪತ್ನಿ ಹರಿಣಿ ಸತೀಶ್ ಹಾಗೂ ವಿವೇಕಾನಂದ ಸ್ನಾತಕೋತ್ತರ ವಿಭಾಗದ ಡೀನ್ ವಿಜಯ ಸರಸ್ವತಿ ನೇರವೇರಿಸಿದರು.

ಈ ಸಂದರ್ಭದಲ್ಲಿ ಜಿ.ಎಲ್.ಆಚಾರ್ಯ ಸಮೂಹ ಸಂಸ್ಥೆಗಳ ಮುಖ್ಯಸ್ಥ ಬಲರಾಮ ಆಚಾರ್ಯ, ಲಕ್ಮೀಕಾಂತ್ ಅಚಾರ್ಯ, ವೇದ ಲಕ್ಮೀಕಾಂತ್ ಅಚಾರ್ಯ, ಸುಧನ್ವ ಆಚಾರ್ಯ ಮತ್ತು ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಕೀರ್ತನ್, ಶೋ ರೂಂ ಮ್ಯಾನೇಜರ್ ಪುರಂದರ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಭಾರ್ಗವ್ ಗೋಖಲೆ ಕಾರ್ಯಕ್ರಮ ನಿರೂಪಿಸಿದರು.































 
 

ವಜ್ರದ ಆಭರಣಗಳು ತಮ್ಮ ಅಸಾಧಾರಣ ಸೌಂದರ್ಯ ಹಾಗೂ ದೀರ್ಘಕಾಲ ಬಾಳಿಕೆಯಿಂದ ಬಹಳ ಅಮೂಲ್ಯ ಆಭರಣಗಳು ಎಂದು ಪರಿಗಣಿಸಲ್ಪಟ್ಟಿವೆ. ಜಿ.ಎಲ್.ಆಚಾರ್ಯ ಜ್ಯುವೆಲ್ಲರ್‍ಸ್‌ನಲ್ಲಿ ಸುಮಾರು 3,೦೦೦ಕ್ಕೂ ಮಿಕ್ಕಿದ ಡಿಸೈನ್‌ಗಳಲ್ಲಿ ಕಣ್ಮನ ಸೆಳೆಯುವ ವಜ್ರಾಭರಣಗಳ ಅಮೋಘ ಸಂಗ್ರಹವಿದ್ದು, ಎಲ್ಲಾ ವಯೋಮಿತಿಯ ಗ್ರಾಹಕರಿಗೆ ತಕ್ಕಂತೆ ವಜ್ರಾಭರಣಗಳ ಆಯ್ಕೆ ಲಭ್ಯವಿದೆ. ಮಕ್ಕಳ, ಮಹಿಳೆಯರ ಹಾಗೂ ಪುರುಷರ ಆಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿರುವ ವಜ್ರಾಭರಣಗಳು ಸಂಗ್ರಹವಿದ್ದು, ಗ್ರಾಹಕರಿಗೆ ಆಹ್ಲಾದಕರ ಖರೀದಿಯ ವಾತಾವರಣ ಕಲ್ಪಿಸಲಾಗಿದೆ.

ಗ್ಲೋ  ವಜ್ರಾಭರಣಗಳು ಅಂತರಾಷ್ಟ್ರೀಯ ಪ್ರಯೋಗಾಲಯದಿಂದ ಪ್ರಮಾಣಿಕರಿಸಲ್ಪಟ್ಟ, ಉತ್ರ್ಕಷ್ಟ ಶ್ರೇಣಿಯ, ಗುಣಮಟ್ಟದ ವಜ್ರಗಳಾಗಿದ್ದು ಇದು ಮಾರುಕಟ್ಟೆಯಲ್ಲಿ ಅತ್ಯಂತ ಸ್ಪರ್ದಾತ್ಮಕ ದರದಲ್ಲಿ ಲಭ್ಯವಿದೆ. ಗ್ಲೋ ಫೆಸ್ಟ್‌ನಲ್ಲಿ ವಜ್ರಾಭರಣ ಖರೀದಿ ಮೇಲೆ ಪ್ರತಿ ಕ್ಯಾರೆಟ್‌ಗೆ ರೂ.8,೦೦೦/- ವರೆಗೆ ರಿಯಾಯಿತಿ, 25,೦೦೦/- ಮತ್ತು ಅದಕ್ಕಿಂತ ಮೇಲ್ಪಟ್ಟ ಖರೀದಿಗೆ ವಿಶೇಷ ಮತ್ತು ಆಕರ್ಷಕ ಉಡಗೊರೆ ಪಡೆಯುವ ಸುವರ್ಣವಕಾಶವಿದೆ. ವಜ್ರಾಭರಣಗಳು ದುಬಾರಿ ಎಂದೇ ಭಾವನೆಯಲ್ಲಿರುವ ಜನರಿಗೆ ಕೈಗೆಟಕುವ ದರದಲ್ಲೂ ವಜ್ರಾಭರಣಗಳು ಲಭ್ಯವಿದೆ. ರೂ.೩,೫೦೦ ರಿಂದ ವಜ್ರಾಭರಣದ ಬೆಲೆಗಳು ಪ್ರಾರಂಭವಾಗುತ್ತದೆ. ಮೂಗುತಿ, ಪೆಂಡೆಂಟ್, ಉಂಗುರ, ಕಿವಿಯೋಲೆ ನೆಕ್ಲೇಸ್, ಬಳೆಗಳ ವಿವಿಧ ವಿನ್ಯಾಸಗಳ ಅಮೋಘ ಸಂಗ್ರಹವಿದೆ ಹಾಗೂ ಗ್ಲೋ ಫೆಸ್ಟ್‌ನಲ್ಲಿ ಗ್ರಾಹಕರಿಗೆ ವಜ್ರಾಭರಣಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು.

ಆಧುನಿಕ ಮತ್ತು ಪಾರಂಪರಿಕಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಸುಳ್ಯ, ಮೂಡಬಿದ್ರೆ, ಹಾಸನ ಹಾಗೂ ಕುಶಾಲನಗರದಲ್ಲಿ ತಮ್ಮ ಮಳಿಗೆಗಳನ್ನು ಹೊಂದಿದೆ. ಷರತ್ತುಗಳು ಅನ್ವಯದೊಂದಿಗೆ ಈ ಆಫರ್ ಪುತ್ತೂರು ಹಾಗೂ ಸುಳ್ಯ ಮಳಿಗೆಗಳಲ್ಲಿ ಮಾತ್ರ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top