ಸುಳ್ಯ : ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕರೊಬ್ಬರ ಬ್ಯಾಗ್ ಮತ್ತು ಶೂ ಕಳ್ಳತನ ಮಾಡಿದ ಘಟನೆ ಸುಳ್ಯದಲ್ಲಿ ನಡೆದಿದೆ.
ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದು, ಮಲಗಿದ್ದ ವೇಳೆ ಪ್ರಯಾಣಿಕ ನಿದ್ದೆಯಲ್ಲಿದ್ದಾಗ ಕಳ್ಳ ಶೂ ಮತ್ತು ಬ್ಯಾಗನ್ನು ಕದ್ದು ತಪ್ಪಿಸಿಕೊಂಡಿದ್ದಾನೆ. ಕದಿಯುತ್ತಿದ್ದ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ ಎನ್ನಲಾಗಿದೆ.
ಈ ಘಟನಾನುಸಾರವಾಗಿ ರಾತ್ರಿ ಪಾಳಿಯಲ್ಲಿ ವಾಚ್ ಮ್ಯಾನ್ ಇಲ್ಲದಿರುವುದರಿಂದ ನಿರಂತರವಾಗಿ ಕದಿಯುತ್ತಿದ್ದಾರೆ ಎಂದು ಪ್ರಯಾಣಿಕರು ದೂರಿದ್ದು, ಬಸ್ ನಿಲ್ದಾಣದ ಅಂಗಡಿ ಮಾಲಕರು ರಾತ್ರಿ ಹೊತ್ತಿಗೆ ವಾಚ್ ಮ್ಯಾನ್ ನೇಮಕ ಮಾಡಬೇಕೆಂದು ಸುಳ್ಯದ ಬಸ್ ಡಿಪ್ಪೋ ಮ್ಯಾನೇಜರ್ಗೆ ಮನವಿ ಮಾಡಿಕೊಂಡಿದ್ದಾರೆ.