ಉಪಲೋಕಾಯುಕ್ತ ವೀರಪ್ಪ ಬಿ. ಪುತ್ತೂರಿಗೆ ಭೇಟಿ  | ಹಾರಾಡಿ ವಿದ್ಯಾರ್ಥಿನಿಯರ ನಿಲಯದ ಅವ್ಯವಸ್ಥೆ ಕಂಡು ಗರಂ ಆದ ಉಪಲೋಕಾಯುಕ್ತರು

ಪುತ್ತೂರು: ಉಪಲೋಕಾಯುಕ್ತ ವೀರಪ್ಪ ಬಿ. ಅವರು ಭಾನುವಾರ ಪುತ್ತೂರು ಪುತ್ತೂರು ಸರ್ಕಾರಿ ಆಸ್ಪತ್ರೆ, ಹಾರಾಡಿ ಸಮಾಜ ಕಲ್ಯಾಣ ಇಲಾಖಾ ವಿದ್ಯಾರ್ಥಿನಿ‌ಯರ ನಿಲಯ, ಬೀರಮಲೆಯ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು.

ಹಾರಾಡಿ ವಿದ್ಯಾರ್ಥಿನಿಯರ ನಿಲಯಕ್ಕೆ ಭೇಟಿ ನೀಡಿದ ಅವರು, ಸರಿಯಾದ ಸಮಯಕ್ಕೆ ಸಿಗದ ಊಟದ ವ್ಯವಸ್ಥೆ, ಹಾಸ್ಟೆಲ್ ಸುತ್ತ ಸುತ್ತು ಬೇಲಿ ಇಲ್ಲದಿರುವುದು, ಗ್ಯಾಸ್ ಸಿಲಿಂಡರ್ ಇಡಲು ಪ್ರತ್ಯೇಕ ಕೊಠಡಿ ಇಲ್ಲದಿರುವುದು, ವಿದ್ಯಾರ್ಥಿನಿಯರಿಗೆ ಓದಲು ಸರಿಯಾದ ಲೈಬ್ರೇರಿ ವ್ಯವಸ್ಥೆ ಇಲ್ಲದನ್ನು ಕಂಡು ನಿಲಯದ ವಿದ್ಯಾರ್ಥನಿಯರಿಂದ ದೂರು ಪಡೆದುಕೊಂಡು ತಕ್ಷಣ ವ್ಯವಸ್ಥೆಯನ್ನ ಸರಿಪಡಿಸುವುದಾಗಿ ತಿಳಿಸಿದ ಉಪಲೋಕಾಯುಕ್ತರು, ಬಳಿಕ ಹಾಸ್ಟೆಲ್ ವಾರ್ಡನ್ ಗಳನ್ನ ತರಾಟೆಗೆತ್ತಿಕೊಂಡರು.

oplus_0

ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿನಿಯರಿಗೆ ಅಗತ್ಯವಾದ ಊಟದ ವ್ಯವಸ್ಥೆಯನ್ನ ಸರಿಪಡಿಸಬೇಕು, ಲೈಬ್ರೇರಿಗೆ ಹೆಚ್ಚಿನ ಪಠ್ಯ ಪುಸ್ತಕ ತರುವಂತೆ, ಹಾಸ್ಟೆಲ್ ನ ಸುತ್ತಲೂ ಸುತ್ತು ಬೇಲಿಯನ್ನ ಒಂದು ವಾರದ ಒಳಗೆ ಹಾಕಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಫೋನ್ ಮೂಲಕ ಕರೆ ಮಾಡಿ ಸೂಚಿಸಿದರು. ಒಂದು ವಾರದ ಒಳಗೆ ಸರಿಪಡಿಸದಿದ್ದರೆ ವಾರ್ಡನ್ ಸೇರಿದಂತೆ ಸಂಬಂಧಪಟ್ಟವರ ಮೇಲೆ ಸುಮೋಟೊ ಕೇಸ್ ಹಾಕುವ ಎಚ್ಚರಿಕೆ ನೀಡಿದರು.































 
 

ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ವ್ಯವಸ್ಥೆಯನ್ನ ಕಂಡು ಸಂತಸ ವ್ಯಕ್ತಪಡಿಸಿದ ಉಪಲೋಕಾಯುಕ್ತರು, ಹಾರಾಡಿಯ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿ ನಿಲಯದ ಅವ್ಯವಸ್ಥೆ ಕಂಡು ಗರಂ ಆದರು.

ಹಾರಾಡಿಯಿಂದ ಬೀರಮಲೆ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿ ವಿದ್ಯಾರ್ಥಿಗಳ ಸಮಸ್ಯೆಯನ್ನ ಆಲಿಸಿ ಸರಿಪಡಿಸುವುದಾಗಿ ಭರವಸೆ ನೀಡಿದರು.

ಪುತ್ತೂರಿನ ಸರ್ಕಾರಿ ಆಸ್ಪತ್ರೆ, ಹಾಸ್ಟೆಲ್ ಗಳಿಗೆ ಉಪಲೋಕಾಯುಕ್ತರು ಭೇಟಿ ನೀಡಿದ ವೇಳೆ ಲೋಕಾಯುಕ್ತ ಎಸ್ಪಿ ನಟರಾಜ್, ಡಿವೈಎಸ್ಪಿ ಗಾನಾ ಮೊದಲಾದ ಅಧಿಕಾರಿಗಳು ಉಪಸ್ಥಿತರಿದ್ದರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top