ಅಪ್ರಾಪ್ತೆ ಯುವತಿಯ ಮೇಲೆ ಅತ್ಯಾಚಾರ | ಆರೋಪಿಗೆ ಶರತ್ತುಬದ್ಧ ಜಾಮೀನು

ಕಾಣಿಯೂರು: ಅಪ್ರಾಪ್ತೆ ಯುವತಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯೊಬ್ಬನಿಗೆ ಪುತ್ತೂರು ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ ಬಿಡುಗಡೆ ಮಾಡುವಂತೆ ಆದೇಶಿಸಿದೆ.

ಕಡಬ ಪೋಲೀಸ್ ಠಾಣಾ ವ್ಯಾಪ್ತಿಗೊಳಪಟ್ಟ ಅಪ್ರಾಯಸ್ಥ ಯುವತಿಯೋರ್ವಳ ಮೇಲೆ ಅದೇ ಗ್ರಾಮದ ನಂದನ್ ಎಂ.ಇ ಎಂಬ ಯುವಕ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಆತನ ವಿರುದ್ಧಅ. 8ರಂದು ಕಡಬ ಪೋಲೀಸ್ ಠಾಣೆಯಲ್ಲಿ Crime No :79/2024  ರಂತೆ ಭಾರತೀಯ ದಂಡ ಸಂಹಿತೆಯ ಕಲಂ 376 (3), 376(2)(n), 506 IPC  ಮತ್ತು POCSO ಕಾಯಿದೆಯ 6, 12ರ ಅಡಿಯಲ್ಲಿ ಮೊಕದಮ್ಮೆ ದಾಖಲಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿತ್ತು.

ಬಳಿಕ ಆರೋಪಿಯ ವಿರುದ್ಧ ದೋಷರೋಪಣಾ ಪಟ್ಟಿಯನ್ನು ಕೂಡಾ ದಾಖಲಿಸಲಾಗಿತ್ತು. ಈ ಹಂತದಲ್ಲಿ ಆರೋಪಿಯನ್ನು  ಜಾಮೀನಿನಲ್ಲಿ ಬಿಡುಗಡೆಗೊಳಿಸುವಂತೆ ಜಾಮೀನು ಅರ್ಜಿಯನ್ನು ಇತ್ತೀಚೆಗೆ ಸಲ್ಲಿಸಲಾಗಿತ್ತು. ಬಳಿಕ ಆರೋಪಿ ಸಲ್ಲಿಸಿದ ಜಾಮೀನು ಅರ್ಜಿಯ ಮೇಲೆ ವಾದ ವಿವಾದಗಳನ್ನು ಆಲಿಸಿದ ಮಾನ್ಯ ದ.ಕ ಜಿಲ್ಲಾ 5 ನೇ ಹೆಚ್ಚುವರಿ ನ್ಯಾಯಾಲಯ ಪುತ್ತೂರು ಇದರ ನ್ಯಾಯಾಧೀಶೆ ಸರಿತಾ ಡಿ. ಅವರು ಆರೋಪಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಆದೇಶಿಸಿರುತ್ತಾರೆ.































 
 

ಆರೋಪಿ ಪರವಾಗಿ ಸುಳ್ಯದ ವಕೀಲರಾದ ಎಂ.ವೆಂಕಪ್ಪ ಗೌಡ, ಚಂಪಾ ವಿ ಗೌಡ, ರಾಜೇಶ್ ಬಿ.ಜಿ ,ಶ್ಯಾಮ್ ಪ್ರಸಾದ್ ಎನ್.ಕೆ ಹಾಗೂ ಸಂಜನ್ ಕೋಲ್ಚಾರ್  ವಾದಿಸಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top