ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕಿನ ಸೇವಾ ಪ್ರತಿನಿಧಿಗಳಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ಡಿ.20 ರಂದು ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವಿಟ್ಲ ವ್ಯಾಪ್ತಿಯ 64 ಕಾರ್ಯ ಕ್ಷೇತ್ರದ 64 ಸೇವಪ್ರಾತಿನಿಧಿಗಳಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಮರ್ಥ್ಯ ಅಭಿವೃದ್ಧಿ ತರಬೇತಿ ಹಮ್ಮಿಕೊಂಡಿದ್ದು ಈ ತರಬೇತಿ ಕಾರ್ಯ ಗಾರ ವನ್ನೂ ಕೇಂದ್ರ ಕಚೇರಿ ಸೇವಪ್ರತಿ ವಿಭಾಗದ ಯೋಜನಾಧಿಕಾರಿ ಶಿವಪ್ರಸಾದ್ ವಿಧಿವತ್ತಾಗಿ ಉದ್ಘಾಟಿಸಿದರು.
ದರುಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ಧರ್ಮಸ್ಥಳದ ಹಿನ್ನಲೆ ಹಾಗೂ ನಡೆದು ಬಂದ ದಾರಿ ,ಯೋಜನೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಿಟ್ಲ ಯೋಜನಾಧಿಕಾರಿ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಕಛೇರಿಯ ಸೇವಪ್ರತಿನಿಧಿ ವಿಭಾಗದ ಯೋಜನಾಧಿಕಾರಿಗಳು , ಸೇವಪ್ರಟಿನಿಧಿಗಳ ವಿವಿಧ ಕೆಲಸ ಕಾರ್ಯಗಳಿಗೆ ನೀಡಲಾಗುವ ಉತ್ತೇಜಕ, ಗೌರವಧನ, ದಿನಭತ್ಯೇ, ಸೇವಾ ಪ್ರತಿನಿಧಿಗಳಲಿರಬೇಕಾದ ಗುಣ, ನಡತೆ, ಅರ್ಹತೆ, ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ನೀಡಿದರು. ಬಳಿಕ ಯೋಜನಾಧಿಕಾರಿ ಶಕುಂತಲಾ ಯೋಜನೆಯ ಕುರಿತು ಪ್ರಾಥಮಿಕ ದಶ ಅಂಶಗಳು, ಬ್ಯಾಂಕ್ ಎಂ. ಒ. ಯು. ಎಂದರೇನು, ಅದರ ಪ್ರಾಮುಖ್ಯತೆ, ಸಿಬಿಲ್ ಅನುಷ್ಟಾಂಡ, ಆರ್. ಬಿ. ಐ, ಲೈಸೆನ್ಸ್ ಮತ್ತು ಬ್ಯಾಂಕ್ ಸ್ಟೇಟ್ ಮೆಂಟ್ ಬಗ್ಗೆ ಸವಿವರವಾಗಿ ತಿಳಿಸಿದ್ದಾರೆ.
ಗುಂಪು ಲೆಕ್ಕಪರಿಶೋಧನಾ ವಿಭಾಗದ ಯೋಜನಾಧಿಕಾರಿ ಆನಂದ ಕೇಂದ್ರ ಕಚೇರಿ ಧರ್ಮಸ್ಥಳ ಅವರು ಬಡ್ಡಿ ಲೆಕ್ಕಾಚಾರ, ವಿವಿಧ ರೀತಿಯ ಬಡ್ಡಿ, ಇತರ ಸಂಸ್ಥೆಗಳ ಬಡ್ಡಿ ಲೆಕ್ಕಾಚಾರ, ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಬಡ್ಡಿದರದ ವಿಶ್ಲೇಷಣೆ ಯ ಬಗ್ಗೆ ಸೂಕ್ತ ಮಾಹಿತಿ ನೀಡಿದರು.
ಸಿ.ಆರ್.ಐ ಪ್ರಾಂಶುಪಾಲ ಸೋಮನಾಥ ಮನೆ ಬೇಟಿಯ ಮಹತ್ವ, ವಿಧಾನ ಹೇಗೆ ಹಾಗೂ ಸಮರ್ಪಕ ಸಂವಹಣದಿಂದ ಆಗುವ ಲಾಭಗಳ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು. ತಾಂತ್ರಿಕ ಪ್ರಬಂಧಕ ದಾದ ಫೀರ್ ಮೈಕ್ರೊಲ್ಯಾಬ್ ನಡೆಸಿಕೊಟ್ಟರು.
ಕಚೇರಿ ಪ್ರಬಂಧಕರಾದ ವಾಣಿ ವಂದಿಸಿ, ಕೃಷಿ ಅಧಿಕಾರಿ ಕಾರ್ಯಕ್ರಮ ನಿರೂಪಿಸಿದರು.