ಪುತ್ತೂರು: ಸರಕಾರಿ ಬಸ್ ಹಾಗೂ ಬೈಕ್ ಡಿಕ್ಕಿ ಹೊಡೆದುಕೊಂಡ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಇದೀಗ ಮುರದಲ್ಲಿ ನಡೆದಿದೆ.
ಪಡ್ನೂರು ನಿವಾಸಿ ಅಬ್ದುಲ್ ಕುಂಞಿ (65) ಮೃತಪಟ್ಟ ಬೈಕ್ ಸವಾರ.
ಮುರದಲ್ಲಿ ಮೆಡಿಕಲ್ ಒಂದಕ್ಕೆ ಬಂದು ವಾಪಾಸ್ ರಸ್ತೆ ದಾಟಿ ಕೆದಿಲ ರಸ್ತೆಯತ್ತ ಬೈಕ್ ಚಲಾಯಿಸಿದಾಗ ಮಾಣಿ ಕಡೆಯಿಂದ ಬಂದ ಬಸ್ ಡಿಕ್ಕಿಯಾಗಿದೆ ಎನ್ನಲಾಗಿದೆ.