ಮಂಗಳೂರು : ಮಹಿಳೆಯೋರ್ವಳು ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದು ವಂಚಿಸಿರುವ ಘಟನೆ ಮಂಗಳೂರಿನ ವೆಲೆನ್ಸಿಯಾ ಕೆನರಾ ಬ್ಯಾಂಕ್ನಲ್ಲಿ ನಡೆದಿದೆ. ಮಂಗಳೂರಿನ ವೆಲೆನ್ಸಿಯಾ ಕೆನರಾ ಬ್ಯಾಂಕ್ ಶಾಖೆಯ ಮ್ಯಾನೇಜರ್ ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದು ವಂಚಿಸಿರುವ ಮಹಿಳೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಭಾವತಿ ಪ್ರಭು ಎಂಬ ಮಹಿಳೆ 2024ರ ಅ.22 ರಂದು 1.31 ಲ.ರೂ., ಆ. 25ರಂದು 111 ಲ.ರೂ. ನ 21ರಂದು 144 ಲ ರೂ. 29ರಂದು 241 ಲ.ರೂ. ಡಿ 3ರಂದು 2496 ಲ.ರೂ. ಬ್ಯಾಂಕ್‌ನಿಂದ ಸಾಲ ಪಡೆದುಕೊಂಡಿದ್ದರು.
ಬಳಿಕ ಅಡ್ವೈಸರಾಗಿದ್ದ ಹರೀಶ್ ರಾಜ್ ಚಿನ್ನಾಭರಣಗಳನ್ನು ಪರಿಶೀಲಿಸಿದ್ದರು. ಪ್ರಭಾವತಿ ಮತ್ತೆ ಚಿನ್ನಾಭರಣ ಅಡವಿಡಲು ಬಂದಾಗ ಈ ಹಿಂದೆ ಅಡ್ವೈಸರ್ ಆಗಿದ್ದ ಹರೀಶ್ ರಾಜ್ ಇರಲಿಲ್ಲ. ಅವರ ಬದಲಾಗಿ ರಾಜೇಶ್ ಎಂಬವರನ್ನು ಕರೆಸಿ ಚಿನ್ನಾಭರಣಗಳನ್ನು ಪರಿಶೀಲಿಸಿದಾಗ ನಕಲಿ ಎಂದು ತಿಳಿದು ಬಂದಿದೆ.
ಬಳಿಕ ಪ್ರಭಾವತಿ ಹಿಂದೆ ಅಡವಿಟ್ಟಿದ್ದ ಆಭರಣಗಳನ್ನು ಪರಿಶೀಲಿಸಿದಾಗ ನಕಲಿ ಎನ್ನಲಾಗಿದೆ.
ಪ್ರಭಾವತಿಯವರನ್ನು ಬ್ಯಾಂಕ್ ಮ್ಯಾನೇಜರ್ ಪ್ರಶ್ನಿಸಿದಾಗ ಚಿನ್ನಾಭರಣ ಸಂಬಂಧಿ ಸುನೀಲ್ ಅವರದಾಗಿದ್ದು, ಆತನ ಸೂಚನೆಯಂತೆ ಸಾಲ ಪಡೆದು ಹಣವನ್ನು ಸುನಿಲ್ ಖಾತೆಗಳಿಗೆ ಜಮ ಮಾಡಿರುವುದಾಗಿ ತಿಳಿಸಿದ್ದಾರೆ. ಮಂಗಳೂರು ನಗರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ