ಉಪ್ಪಿನಂಗಡಿ : ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ )ಉಪ್ಪಿನಂಗಡಿ ಸಂಗಮ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ನೂತನವಾಗಿ ರಚಿತವಾದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ನವೀನ್ ಬ್ರಾಗ್ಸ್, ಕಾರ್ಯಾಧ್ಯಕ್ಷರಾಗಿ ಮಾಜಿ ಶಾಸಕ ಸಂಜೀವ ಮಠಂದೂರು, ಗೌರವಾಧ್ಯಕ್ಷರಾಗಿ ಉಪಪ್ರಾಂಶುಪಾಲೆ ದೇವಕಿ ಡಿ.,ಉಪಾಧ್ಯಕ್ಷರಾಗಿ ಜಯಕುಮಾರ ಪೂಜಾರಿ ಇಳoತಿಲ, ಹಾಗೂ ಚಂದ್ರಶೇಖರ ಮಡಿವಾಳ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿ ಝಕರಿಯ ಕೊಡಿಪಾಡಿ, ಜೊತೆ ಕಾರ್ಯದರ್ಶಿಗಳಾಗಿ ಪ್ರಜ್ಞಾ ಶೆಟ್ಟಿ, ವೈಶಾಲಿ ಕುಂದರ್, ಸವಿತಾ ಮಸ್ಕರೇನಸ್, ಕೋಶಾಧಿಕಾರಿಯಾಗಿ ಹ್ಯಾಪಿ ಟೈಮ್ಸ್ ಮಾಲಿಕ ಅಬೂಬಕ್ಕರ್ ಸಿದ್ದಿಕ್, ಸಂಘಟನಾ ಕಾರ್ಯದರ್ಶಿಗಳಾಗಿ ರಾಮಚಂದ್ರ ಮಣಿಯಣಿ, ಮಹಮ್ಮದ್ ಆಸಿರ್, ಜಗದೀಶ ನಾಯಕ್, ಏಕ ವಿದ್ಯಾಧರ ಜೈನ್, ಕೇಶವ ಬೆತ್ತೋಡಿ, ಸಲಹೆಗಾರರಾಗಿ ಎನ್.ಉಮೇಶ ಶೆಣೈ ,ಗೋಪಾಲ ಶೆಟ್ಟಿ ಕಳೆಂಜ, ದುರ್ಗಾಮಣಿ.ಯಂ,ಯು.ರಾಜೇಶ್ ನಾಯಕ್, ಮುನೀರ್ ದಾವುದ್, ಅಬ್ದುಲ್ ರಹಿಮಾನ್ ಯೂನಿಕ್, ಹಾರೂನ್ ರಶೀದ್ ಅಗ್ನಾಡಿಯವರನ್ನು ಆಯ್ಕೆ ಮಾಡಲಾಗಿದೆ.
ಕ್ರೀಡಾ ಕಾರ್ಯದರ್ಶಿಯಾಗಿ ರಾಜೇಶ್ ರಾಮನಗರ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ರಘುರಾಮ ರಾಮನಗರ, ದೀಪಕ್ ಪೈ ರಾಮನಗರ ಅವರು ಅಯ್ಕೆಗೊಂಡಿದ್ದಾರೆ.
ಮಾಧ್ಯಮ ಸಲಹೆಗಾರರಾಗಿ ಯು.ಎಲ್. ಉದಯಕುಮಾರ್, ಆಂತರಿಕ ಲೆಕ್ಕಪರಿಶೋಧಕರಾಗಿ ನಿವೃತ್ತ ಉಪ ಪ್ರಾಂಶುಪಾಲ ದಿವಾಕರ ಆಚಾರ್ಯ ಗೇರುಕಟ್ಟೆ, ಸಾಮಾಜಿಕ ಜಾಲತಾಣ ನಿರ್ವಹಣೆ ಇರ್ಷಾದ್ ಯು. ಟಿ. ಕಾರ್ಯ ನಿರ್ವಹಿಸಲಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶ್ರಫ್ ಬಸ್ತಿಕಾರ್, ಜಗದೀಶ್ ಶೆಟ್ಟಿ. ಕೆ, ಕಲಂದರ್ ಶಾಪಿ ಯುನಿಕ್, ನವಾಜ್ ಎಲೈಟ್, ರಶೀದ್ ಮಠ, ಮಜೀದ್ ಕುದ್ಲೂರು, ಸುರೇಶ್ ಅತ್ರ ಮಜಲು, ಫೌಜರ್ ಯು.ಟಿ, ಜಲೀಲ್ ಮುಕ್ರಿ ,ಅಜೀಜ್ ಬಸ್ತಿಕಾರ್, ರವೀಂದ್ರ ದರ್ಬೆ, ಕೇಶವ ರಂಗಾಜೆ, ಜೋಸೆಫ್ ಡಿ ಸೋಜ, ಕೆನ್ಯೂಟ್ ಮಸ್ಕರೆನ್ಹಸ್ , ರವಿ ಇಳಂತಿಲ, ಆನಂದ ಕುಂಟಿನಿ, ಮನ್ಸೂರು ಕುದ್ಲೂರು, ಪ್ರವೀಣ್ ಸಿಕ್ವೇರಾ, ನಾರಾಯಣ ಬಂಡಾಡಿ, ವಿನ್ಸೆಂಟ್ ಮೊರಾಸ್, ಅರುಣ್ ಬಿ.ಕೆ, ವಿಜಯಕುಮಾರ ಕಲ್ಲಲಿಕೆ, ಫಾರೂಕ್ ಜಿಂದಗಿ , ರಿಜ್ವಾನ್ ಆಯಿಮ್ ಅವರನ್ನು ಆಯ್ಕೆ ಮಾಡಲಾಗಿದೆ.