ಪುತ್ತೂರು: ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಕ್ರೀಡಾಕೂಟ ನಡೆಯಿತು.
ಮಾಜಿ ಕ್ರೀಡಾ ಮತ್ತು ಯುವಜನ ಸಬಲೀಕರಣ ನಿರ್ದೇಶಕ ಮಾಧವ ಬಿ. ಕೆ. ಧ್ವಜಾರೋಹಣ ನೆರವೇರಿಸಿ, ದೀಪ ಬೆಳಗಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಪಠ್ಯದೊಂದಿಗೆ ದೈಹಿಕ ಶಿಕ್ಷಣಕ್ಕೂ ಮಹತ್ವವನ್ನು ನೀಡಬೇಕು. ಆಗಾದಾಗ ಮಗುವಿನ ದೈಹಿಕ ,ಮಾನಸಿಕ, ಬೌದ್ಧಿಕ ಬೆಳವಣಿಗೆಯಾಗಿ ಸರ್ವತೋಮುಖ ವಿಕಸನ ಸಾಧ್ಯ ಎಂದರು.
ಅತಿಥಿಯಾಗಿ ದೈಹಿಕ ಶಿಕ್ಷಣ ಶಿಕ್ಷಕ ಮಾಧವ ಪೆರಿಯತೋಡಿ ಕ್ರೀಡಾಕೂಟ ನಿರ್ವಹಿಸಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕ ಎ.ವಿ.ನಾರಾಯಣ, ಉಪಾಧ್ಯಕ್ಷ ಉಮೇಶ್ ಮಳುವೇಲು, ನಿರ್ದೇಶಕರಾದ ಗಂಗಾಧರ ಗೌಡ, ಪ್ರತಿಭಾ ದೇವಿ, ದೀಕ್ಷಾ ವಾಮನ ಗೌಡ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಶ್ರೀ ಹೆಗಡೆ, ಪ್ರಾಂಶುಪಾಲೆ ಸವಿತಾ ಕುಮಾರಿ. ಬೋಧಕ ಹಾಗೂ ಬೋಧಕೇತರ ವೃಂದ, ಪೋಷಕ ವೃಂದ ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿ ರಾಧಾ ಅತಿಥಿಗಳ ಪರಿಚಯ ಮಾಡಿದರು. ಪ್ರಾಂಶುಪಾಲೆ ಸವಿತಾ ಕೆ. ಸ್ವಾಗತಿಸಿ, ಶಿಕ್ಷಕಿ ಯಶುಭ ವಂದಿಸಿದರು. ಶಿಕ್ಷಕಿಯರಾದ ರೀಮಾ ಲೋಬೋ, ಹರ್ಷಿತ ಕಾರ್ಯಕ್ರಮ ನಿರೂಪಿಸಿದರು.