ಸುಳ್ಯ: ಮೊಬೈಲ್ ನಲ್ಲಿ ಸ್ಟೇಟಸ್ ಹಾಕಿಕೊಂಡು ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದಲ್ಲಿ ನಡೆದಿದೆ.
ಮಂಡೆಕೋಲು ಶಿವಾಜಿನಗರ ನಿವಾಸಿ ಪುರುಷೋತ್ತಮ(30) ಆತ್ಮಹತ್ಯೆ ಮಾಡಿಕೊಂಡವರು.
ಕೂಲಿ ಕೆಲಸ ಮಾಡಿ ಜೀವನ ಮಾಡಿಕೊಂಡಿದ್ದ ಪುರುಷೋತ್ತಮ್ ತನ್ನ ಮೊಬೈಲ್ ಸ್ಟೇಟಸ್ ನಲ್ಲಿ “ಓಂ ಶಾಂತಿ ಎನ್ನ ಜೋಕ್ಲೆನ್ ಸೋಕುಡು ತೂವೆನ್ಲೆ ಅಣ್ಣ” ಎಂದು ಬರೆದು ಹಾಕಿ ಮನೆಯ ಪಕ್ಕದ ಗುಡ್ಡೆಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.