ಕಡಬ: ಬಂಟ್ವಾಳ ತಾಲೂಕಿನ ಪುದು ಗ್ರಾಮದ ನೆತ್ತರಕೆರೆ ಸಮೀಪದ ರೈಲ್ವೆ ಹಳಿಯ ಬದಿಯ ಪೊದೆಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.
ಇದು ಬಿಳಿನೆಲೆ ಗ್ರಾಮದ ನೆಟ್ಟಣ ನಿವಾಸಿ ದಿ. ಚಂದನ್ ಎಂಬವರ ಪುತ್ರ ಶಶಿಕುಮಾರ್ ಎಸ್.(40ವ.) ಎಂದು ಗುರುತಿಸಲಾಗಿದೆ.
ಬಂಟ್ವಾಳ ನಗರ ಪೊಲೀಸರು ಹಾಗೂ ಮಂಗಳೂರು ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ವ್ಯಕ್ತಿಯ ತಲೆಯ ಮೇಲೆ ಗಾಯವಾದ ಕುರುಹುಗಳು ಕಂಡುಬಂದಿದ್ದು, ರಕ್ತಸಿಕ್ತ ಮಾದರಿಯಲ್ಲಿರುವ ಶವವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶಶಿಕುಮಾರ್ ಅವರು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಪತ್ನಿ ಜೊತೆ ವಾಸ್ತವ್ಯವಿರಲಿಲ್ಲ ಎಂದು ತಿಳಿದು ಬಂದಿದೆ.