ಪುತ್ತೂರು : ಅಕ್ಷಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಸೇವಾಧಾಮ ಸೇವಾಭಾರತಿ ಪುನರ್ವಸತಿ ಮಾಹಿತಿ ಕಾರ್ಯಾಗಾರ ನಡೆಯಿತು.
ಸೇವಾಭಾರತಿ ಪುನರ್ವಸತಿ ಕೇಂದ್ರ ವತಿಯಿಂದ ಬೆನ್ನೆಲುಬು ಸಂಬಂಧಿಸಿದ ಸಮಸ್ಯೆಗಳು , ಅಂಗವಿಕಲತೆ, ಬೆನ್ನುರಿಗೆ ಕಾರಣಗಳು ಮತ್ತು ಪರಿಹಾರದ ಬಗ್ಗೆ ಮಾಹಿತಿ ಕಾರ್ಯಗಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ವ್ಯವಸ್ಥಾಪಕ ಸೇವಾಭಾರತಿ ಸೇವಾಧಾಮ ಚರಣ್ ಕುಮಾರ್ ರವರು ಸೇವಾಭಾರತಿ ಪುನರ್ವಸತಿ ಕೇಂದ್ರ ವತಿಯಿಂದ ಲಭ್ಯ ವಾಗುವ ಸೇವೆಗಳ ಕುರಿತು ಮಾಹಿತಿ ಕಾರ್ಯಾಗಾರ ನಡೆಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಕಿಶೋರ್ ಕುಮಾರ್ ರೈ.ಕೆ ವಹಿಸಿದರು.
ಕಾರ್ಯಕ್ರಮದಲ್ಲಿ ಸೇವಾಭಾರತಿ ಸ್ವಯಂಸೇವಕ ಸುಕುಮಾರ್ , ರಾಷ್ಟ್ರೀಯ ಸೇವಾ ಯೋಜನೆ ಯೋಜನಾಧಿಕಾರಿ ಮೇಘಶ್ರೀ, ರಾಷ್ಟ್ರೀಯ ಸೇವಾ ಯೋಜನೆ ಸಹಯೋಜನಾಧಿಕಾರಿ ಗಂಧರ್ವ ಉಪಸ್ಥಿತರಿದ್ದರು.
ಈ ವೇಳೆ ಎನ್ ಎಸ್ ಎಸ್ ಘಟಕದ ನಾಯಕ, ನಾಯಕಿಯರು, ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕ, ಸೇವಕಿಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಸ್ಪೂರ್ತಿ ಪ್ರಾರ್ಥಿಸಿ, ವೇಣುಶ್ರೀ ಸ್ವಾಗತಿಸಿ, ನಿರೂಪಿಸಿದರು.