ಕಾಂಗ್ರೆಸ್‌ ಅವನತಿಗೆ ಸೋನಿಯಾ ಗಾಂಧಿಯ ಆ ತಪ್ಪು ನಿರ್ಧಾರವೇ ಕಾರಣ…

ಪುಸ್ತಕ ಬರೆದು ಕಾಂಗ್ರೆಸ್‌ಗೆ ಮತ್ತೆ ತಲೆನೋವು ತಂದ ಮಣಿಶಂಕರ್‌ ಅಯ್ಯರ್‌

ಹೊಸದಿಲ್ಲಿ : ವಿವಾದಾತ್ಮಕ ಹೇಳಿಕೆಗಳ ಮೂಲಕ ಕಾಂಗ್ರೆಸ್ಸನ್ನು ಹಲವು ಸಲ ಮುಜುಗರಕ್ಕೀಡುಮಾಡಿ ಪಕ್ಷದಲ್ಲಿ ಮೂಲೆಗುಂಪಾಗಿದ್ದ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಈಗ ಪುಸ್ತಕವೊಂದನ್ನು ಬರೆದು ಮತ್ತೆ ಕಾಂಗ್ರೆಸ್‌ಗೆ ತಲೆನೋವು ತಂದಿದ್ದಾರೆ. ಈ ಪುಸ್ತಕದಲ್ಲಿ ಅನೇಕ ರಾಜಕೀಯ ಬೆಳವಣಿಗೆಗಳನ್ನು ನೆನಪಿಸಿಕೊಂಡಿರುವ ಅಯ್ಯರ್‌ ರಾಜಕೀಯದಲ್ಲಿ ತನ್ನ ಉನ್ನತಿಗೂ ಅವನತಿಗೂ ಗಾಂಧಿ ಕುಟುಂಬವೇ ಕಾರಣ ಎಂದು ದೂರಿಕೊಂಡಿದ್ದಾರೆ.

ಎ ಮೆವರಿಕ್‌ ಇನ್‌ ಪೊಲಿಟಿಕ್ಸ್‌ : 1999-2024 ಎಂಬ ಪುಸ್ತಕ ಮನ್‌ಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದ ಕಾಲದ ರಾಜಕೀಯ ವಿದ್ಯಮಾನಗಳ ಕುರಿತು ಬೆಳಕು ಚೆಲ್ಲುತ್ತಿದೆ. ಈ ಪುಸ್ತಕಕ್ಕೆ ಸಂಬಂಧಿಸಿದ ಸಂದರ್ಶನವೊಂದರಲ್ಲಿ ಅಯ್ಯರ್‌ ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ. 2012ರಲ್ಲಿ ಪ್ರಣಬ್‌ ಮುಖರ್ಜಿ ಅವರನ್ನು ಪ್ರಧಾನಿಯಾಗಿ ನೇಮಿಸಿದ್ದರೆ 2014ರಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಮರಳಿ ಅಧಿಕಾರಕ್ಕೆ ಖಂಡಿತ ಬರುತ್ತಿತ್ತು ಎಂದು ಹೇಳುವ ಮೂಲಕ ನೇರವಾಗಿ ಸೋನಿಯಾ ಗಾಂಧಿಯನ್ನೇ ಗುರಿಮಾಡಿಕೊಂಡು ಟೀಕಿಸಿದ್ದಾರೆ.































 
 

2012ರಲ್ಲಿ ರಾಷ್ಟ್ರಪತಿ ಆಯ್ಕೆ ನಡೆದಾಗ ಅಂದಿನ ಪ್ರಧಾನಿಯಾಗಿದ್ದ ಡಾ.ಮನಮೋಹನ್‌ ಸಿಂಗ್‌ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಬೇಕಿತ್ತು ಹಾಗೂ ಸಚಿವರಾಗಿದ್ದ ಪ್ರಣಬ್‌ ಮುಖರ್ಜಿ ಅವರಿಗೆ ಪ್ರಧಾನಿ ಹುದ್ದೆ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. 2012ರಲ್ಲಿ ಸೋನಿಯಾ ಗಾಂಧಿ ಅವರು ಪ್ರಣಬ್‌ರನ್ನು ಕರೆದು ನೀವು ಪ್ರಧಾನಿಯಾಗಬಹುದು ಎಂದು ಆಫರ್‌ ನೀಡಿದ್ದರು. ಸೋನಿಯಾ ನೀಡಿದ್ದ ಆಫರ್‌ ನೋಡಿ ನನಗೆ ಅಚ್ಚರಿಯಾಗಿದೆ ಎಂದು ಪ್ರಣಬ್‌ ಅವರು ನನ್ನ ಬಳಿ ಹೇಳಿದ್ದರು ಎಂದು ತಿಳಿಸಿದರು.
ನಾನು ಪ್ರಣಬ್‌ ಪ್ರಧಾನಿಯಾಗುತ್ತಾರೆ ಎಂದುಕೊಂಡಿದ್ದೆ. ಆದರೆ ನನ್ನ ನಿರೀಕ್ಷೆ ಉಲ್ಟಾ ಆಯ್ತು. ಪ್ರಣಬ್‌ ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿ ಮುಂದುವರಿದರು. ಪ್ರಣಬ್‌ ಅತ್ಯುತ್ತಮ ಕೆಲಸಗಾರರಾಗಿದ್ದರಿಂದ ಪ್ರಧಾನಿ ಹುದ್ದೆ ನೀಡಬೇಕಿತ್ತು. ಆಡಳಿತದಲ್ಲಿ ಅನನುಭವಿ ಆಗಿದ್ದ ಡಾ.ಸಿಂಗ್‌ ಅವರಿಗೆ ರಾಷ್ಟ್ರಪತಿ ಹುದ್ದೆ ನೀಡಬೇಕಿತ್ತು ಎಂದು ಅಯ್ಯರ್‌ ಪ್ರತಿಪಾದಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top