ಪುತ್ತೂರು : ಕೆಲವು ದಿನಗಳಿಂದ ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡ್ನೂರ್ ನ ಚಾಕೋಟೆ, ಪುವಂದೂರು ವಿವಿಧ ಪ್ರದೇಶಗಳಲ್ಲಿ ಆನೆಗಳು ಕೃಷಿ ಹಾನಿ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದು,. ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಪುವಂದೂರಿಗೆ ಭೇಟಿ ನೀಡಿ ಪರಿಶೀಲಿಸಿದರು.
ಪುವಂದೂರಿನ ಸ್ವಾತಿ ಭಟ್, ರೇವತಿ ಭಟ್ ಅವರ ಕೃಷಿ ತೋಟಗಳಿಗೆ ಕಳೆದ ಒಂದು ವಾರದಿಂದ ಆನೆಗಳು ದಾಳಿ ಮಾಡಿ ಕೃಷಿ ಹಾನಿಗೊಳಿಸಿದೆ. ಕೃಷಿಕರು ಹನಿ ನೀರಾವರಿಗೆ ಹಾಕಿರುವ ಪೈಪ್ ಲೈನ್ ಗಳಿಗೆ ಹಾನಿ ಮಾಡಿದೆ. ಅಲ್ಲದೆ ಪುತ್ತೂರು ತಾಲೂಕಿನ ಬೆಳ್ಳಿಪಾಡಿ, ಕೆಯ್ಯೂರು ವಿವಿಧ ಗ್ರಾಮಗಳಲ್ಲಿ ಕಾಡಾನೆಗಳು ಕಾಡುಬಿಟ್ಟು ನಾಡಿಗೆ ಕೆಲವು ತಿಂಗಳಿನಿಂದ ನಿರಂತರವಾಗಿ ಬರುತ್ತಿದೆ ಇದರಿಂದಾಗಿ ಜನಸಾಮಾನ್ಯರಿಗೆ ಶಾಲೆ, ಪಟ್ಟಣಕ್ಕೆ ಹೋಗಲು ಭಯದ ವಾತಾವರಣ ನಿರ್ಮಾಣಗೊಂಡಿದೆ.
ಇದಕ್ಕೆ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಆನೆಯನ್ನು ನಾಡಿನಿಂದ ಕಾಡಿನತ್ತ ಓಡಿಸುವ ಜೊತೆಗೆ ಸರಕಾರ ಕೃಷಿಕರಿಗೆ ಸೂಕ್ತ ಪರಿಹಾರವನ್ನು ನೀಡಿ, ಮುಂದೆಂದು ಆನೆಗಳು ಗ್ರಾಮೀಣ ಭಾಗಕ್ಕೆ ಬರದ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅರಣ್ಯ ಇಲಾಖೆಗೆ ಹಾಗೂ ಸರಕಾರಕ್ಕೆ ಸ್ಥಳೀಯರು ಒತ್ತಾಯಿಸಿದರು.