ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಧರ್ಮಸಂಗಮ : ಚಪ್ಪರ ಮುಹೂರ್ತ – ಬೃಹತ್ ಭಗವಧ್ವಜಾರೋಹಣ

ಪುತ್ತೂರು : ಶ್ರೀನಿವಾಸ ಕಲ್ಯಾಣೋತ್ಸವದ ಮೂಲಕ  ಹಿಂದೂ ಸಮುದಾಯದ ಕಲ್ಯಾಣ ಕಾರ್ಯ ನಡೆಯುತ್ತಿದೆ : ಪುತ್ತೂರಿನ ಕಾರ್ಯಕ್ರಮ ಇತಿಹಾಸ ಸೃಷ್ಟಿಸಲಿದೆ – ಪುತ್ತಿಲ ಪರಿವಾರ ಹಿಂದೂ ಸಮಾಜದ ಒಳಿತಿಗಾಗಿ ದುಡಿಯುತ್ತಿರುವುದು ಶ್ಲಾಘನೀಯ- ಮಾಣಿಲ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಇದರ ಸಾರಥ್ಯದಲ್ಲಿ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಡಿ.28 ,29 ರಂದು ಜರಗುವ ದ್ವಿತೀಯ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಧರ್ಮಸಂಗಮ ಕಾರ್ಯಕ್ರಮದ ಚಪ್ಪರ ಮುಹೂರ್ತ ಸಮಾರಂಭ ಡಿ.16 ರಂದು ಮಹಾಲಿಂಗೇಶ್ವರ ದೇವಸ್ಥಾನದ ಎದುರು ನಡೆಯಿತು.

 ಮಹಾಲಿಂಗೇಶ್ವರ ದೇವಳದ ನಡೆಯಲ್ಲಿ ಪ್ರಾರ್ಥನೆಯ ನಂತರ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಜಯರಾಮ್ ಭಟ್ ಚಪ್ಪರ ಮೂಹೂರ್ತದ ಧಾರ್ಮಿಕ ವಿಧಿವಿಧಾನ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯಿದ್ದ ಮಾಣಿಲ ಶ್ರಿಧಾಮದ ಮೋಹನದಾಸ ಸ್ವಾಮಿಜಿ ಪುಷ್ಪಾರ್ಚನೆ ನಡೆಸಿ ಕಾರ್ಯಕ್ರಮದ ಯಶಸ್ವಿಗೆ ಶುಭಹಾರೈಸಿ, ಮೊದಲ ವರ್ಷ ಹಿಂದೂ ಬಂಧುಗಳ ಬೃಹತ್ ಸಂಖ್ಯೆಯಲ್ಲಿ ಸೇರಿಸುವ ಮೂಲಕ ಶ್ರೀನಿವಾಸ ಕಲ್ಯಾಣೋತ್ಸವ ಬಹಳ ಯಶಸ್ವಿಯಾಗಿ ನೆರವೇರಿಸಿದ ಕೀರ್ತಿ ಸಂಘಟಕ ಅರುಣ್ ಕುಮಾರ್ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನವರಿಗೆ ಸಲ್ಲುತ್ತದೆ.































 
 

ಈ ವರ್ಷದ ಕಲ್ಯಾಣೋತ್ಸವ ಕಾರ್ಯಕ್ರಮ ಇತಿಹಾಸ ಸೃಷ್ಟಿಸಲಿದೆ ಎಂದು ಸ್ವಾಮೀಜಿ ತಿಳಿಸಿದರು.

ಮಹಾಲಿಂಗೇಶ್ವರ ದೇವರ ಮಣ್ಣಿನಲ್ಲಿ ವೆಂಕಟರಮಣ ದೇವರ ಸೇವೆ ನಡೆಯುವುದು ಪುಣ್ಯದ ಕೆಲಸ ಎಂದ ಸ್ವಾಮಿಜಿ , ಜಿಲ್ಲೆಯಲ್ಲೇ ಬೃಹತ್ ಕಾರ್ಯಕ್ರಮವಾಗಿ ಈ ವರ್ಷ ನಡೆಯುವುದರಲ್ಲಿ ಸಂಶಯವಿಲ್ಲ ಎಂದರು.

ಶ್ರೀನಿವಾಸ ಕಲ್ಯಾಣೋತ್ಸವದ ಮೂರು ದಿನದ ಕಾರ್ಯಕ್ರಮದಲ್ಲೂ ನಾನು ಭಾಗವಹಿಸುತ್ತೇನೆ ಎಂದರು.

ಧರ್ಮಸಂಗಮ ಕಾರ್ಯಕ್ರಮದ ಮೂಲಕ ಎರಡು ಜಿಲ್ಲೆಯ ಸ್ವಾಮಿಜಿಗಳ ಕೂಡುವಿಕೆ ನಡೆಯಲಿದೆ. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಮಾಜದಲ್ಲಿ ಉದ್ಯೋಗ, ಆರೋಗ್ಯ, ಶೈಕ್ಷಣಿಕ, ಧಾರ್ಮಿಕ ಸೇವೆಯ ಮೂಲಕ ಮನೆಮಾತಾಗಿದೆ. ದಿನದ 24 ಗಂಟೆಯೂ ಹಿಂದೂಗಳ ಸೇವೆಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸನ್ನದವಾಗಿರುವುದು ಶ್ಲಾಘನೀಯ ಕಾರ್ಯ ಎಂದು ಸ್ವಾಮಿಜೀ ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ  ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ, ಶ್ರೀನಿವಾಸ ಕಲ್ಯಾಣೋತ್ಸವದ ಪ್ರಥಮ ವರ್ಷವೂ ಮಾಣಿಲ ಶ್ರೀಗಳ ಪರಿಶ್ರಮವನ್ನು ನೆನಪಿಸಿಕೊಂಡರು. ಪ್ರತಿ ಮನೆಯ ಹಿಂದೂಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೃತಾರ್ಥರಾಗಬೇಕು ಎಂದು ವಿನಂತಿಸಿದರು.

50 ಫೀಟ್ ಎತ್ತರದ ಭಗವದ್ವಜ : ಶ್ರೀನಿವಾಸ ಕಲ್ಯಾಣೋತ್ಸವ ನಡೆಯುವ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ 50 ಫೀಟ್ ಎತ್ತರದ ಬೃಹತ್ ಭಗವಧ್ವಜಸ್ಥಂಭ ಹಾರಿಸಲಾಗಿದೆ.

ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷರಾದ ಶಿವಪ್ರಸಾದ್ ಇಜ್ಜಾವು, ಸ್ವಾಗತ ಸಮಿತಿ ಸಂಚಾಲಕ , ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತಾ , ಉದ್ಯಮಿ ಜೆ.ಕೆ ನಾಯರ್ ,  ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷರಾದ ಮಹೇಂದ್ರ ವರ್ಮ ಬಜತ್ತೂರು, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಉಮೇಶ್ ಕೋಡಿಬೈಲು,  ಸ್ವಾಗತ ಸಮಿತಿ ಸಂಚಾಲಕರಾದ ಅನಿಲ್ ತೆಂಕಿಲ,   ಅಧ್ಯಕ್ಷರಾದ ರಾಜು ಶೆಟ್ಟಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಗಣೇಶ್ ಮಕರಂದ, ಪ್ರಚಾರ ಸಮಿತಿ ಸಂಚಾಲಕ ನವೀನ್ ರೈ ಪಂಜಳ,  ವಕೀಲರಾದ ಚಿನ್ಮಯ್ ರೈ ಈಶ್ವರಮಂಗಲ,  ಬಾಲಚಂದ್ರ ಸೊರಕೆ, ಗಿರೀಶ್ ಕುಮಾರ್, ಸುನೀಲ್ ಬೊರ್ಕರ್, ಸುಜಿತ್ ಕಜೆ, ಪ್ರಜ್ವಲ್ ಘಾಟೆ,  ಪ್ರವೀಣ್ ನಾಯ್ಕ್ ಪಾಂಗಾಳಾಯಿ, ಮನೀಶ್ ಕುಲಾಲ್, ನಿತೀಶ್ ರೈ ತಿಂಗಳಾಡಿ, ಗಣೇಶ್ ಬೆದ್ರಾಳ ಸಹಿತ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು , ಹಿಂದೂ ಸಂಘಟನೆಯ ಪ್ರಮುಖರು ಹಾಗೂ ಪಕ್ಷದ ಮುಖಂಡರು ಸೇರಿದಂತೆ ನೂರಾರು ಕಾರ್ಯಕರ್ತರು ಕಾರ್ಯಲಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು.

ಸಮಿತಿಯ ಪ್ರಧಾನ ಕಾರ್ಯದರ್ಶಿ  ರವಿಕುಮಾರ್ ರೈ ಕೆದಂಬಾಡಿ ಮಠ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top