ಪುತ್ತೂರು: ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಕುಂಬ್ರ ಸಮೀಪದ ಗಟ್ಟಮನೆ ಸನ್ಯಾಸಿಗುಡ್ಡೆಯಲ್ಲಿ ನಡೆದಿದೆ.
ಸನ್ಯಾಸಿಗುಡ್ಡೆ ಕ್ವಾಟ್ರಸ್ ನಿವಾಸಿ ಮರದ ವ್ಯಾಪಾರಿ ಹೈದರಾಲಿ (35) ಆತ್ಮಹತ್ಯ ಮಾಡಿಕೊಂಡವರು.
ಮನೆ ಸಮೀಪದ ರಬ್ಬರ್ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಸಂಪ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.