ಕಾರ್ಕಳ : ಎಸ್ ಡಿ ಎಂ ಕಾಲೇಜಿನ ಹಳೆ ವಿದ್ಯಾರ್ಥಿ, ಕಬ್ಬಡಿ ಆಟಗಾರ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಮುನಿಯಲು ನಿವಾಸಿಯಾದ ಪ್ರೀತಮ್ ಶೆಟ್ಟಿ (26) ಎಂದು ಗುರುತಿಸಲಾಗಿದೆ.
ಸಾಯಿ ರಾಮ್ ಫ್ರೆಂಡ್ಸ್ ಗುರುವಾಯನಕೆರೆ ತಂಡದ ಸಕ್ರಿಯ ಆಹ್ವಾನಿತ ಆಟಗಾರ. ಎಸ್. ಡಿ. ಎಮ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಪ್ರತಿಭಾನ್ವಿತ ಆಟಗಾರ ಕಬಡ್ಡಿ ಆಟದ ಕಾರಣ ಮಂಡ್ಯಕ್ಕೆ ತೆರಳಿದ್ದ ಪ್ರೀತಮ್ ಶೆಟ್ಟಿ ಅವರಿಗೆ ಆಟದ ನಡುವೆ ಎದೆ ನೋವು ಕಾಣಿಸಿಕೊಂಡು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.