ಪುತ್ತೂರು: ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪುತ್ತೂರು ದಶಮಾನೋತ್ಸವ ಸಮಿತಿ ಮತ್ತು ಬನ್ನೂರು ಅಲುಂಬುಡ ಸೇವಾ ಪ್ರತಿಷ್ಠಾನದ ಸಹಯೋಗದೊಂದಿಗೆ, ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಸರ್ವೆ, ಮಹಿಳಾ ಘಟಕ, ಗ್ರಾಮ ಸಮಿತಿಯ ಸಹಕಾರದೊಂದಿಗೆ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಸ್ವಸಹಾಯ ಸಂಘಗಳಿರುವ ಎಲ್ಲಾ ಗ್ರಾಮಗಳಲ್ಲಿ ದಾಂಪತ್ಯ ಜೀವನದ 50 ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮದ ಹಿನ್ನಲೆಯಲ್ಲಿ ಸರ್ವೆ ಗ್ರಾಮದ ತಂಬುತ್ತಡ್ಕ ಈಶ್ವರ ಗೌಡರ ಮನೆಯಲ್ಲಿ ಮೂರು ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಬುಧವಾರ ನಡೆಯಿತು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಮಾದರಿ ದಂಪತಿಗಳನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ. ಒಕ್ಕಲಿಗ ಸ್ವಸಹಾಯ ಟ್ರಸ್ಟಿನ ಮೂಲಕ ಸಂಘಗಳನ್ನು ರಚಿಸಿ ಸಾಲ ಸೌಲಭ್ಯ, ಅನುದಾನಗಳನ್ನು ನೀಡುತ್ತಿರುವುದು ಹೆಗ್ಗಳಿಕೆಯಾಗಿದೆ ಎಂದರು.
ಟ್ರಸ್ಟಿನ ಸ್ಥಾಪಕಾಧ್ಯಕ್ಷ ಎ.ವಿ. ನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಒಕ್ಕಲಿಗ ಸ್ವಸಹಾಯ ಟ್ರಸ್ಟಿನ ಸವಣೂರು ವಲಯದ ನಿರ್ದೇಶಕ ವಸಂತ ವೀರಮಂಗಲ, ಅಲುಂಬುಡ ಸೇವಾ ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ಗೌಡ, ಉಪಾಧ್ಯಕ್ಷ ಪದ್ಮಪ್ಪ ಗೌಡ, ಯುವ ಘಟಕದ ಅಧ್ಯಕ್ಷ ಪದ್ಮನಾಭ ಸರ್ವೆ, ಮಾಗಣೆ ಗೌಡರಾದ ರಮೇಶ್ ಗೌಡ ಕೀನ್ಯಾ ಕಾಯರ್ ಮುಗೇರು, ಜಯರಾಮ ಸರ್ವೆ ಉಪಸ್ಥಿತರಿದ್ದರು. ಸರ್ವೆ ಒಕ್ಕೂಟದ ಅಧ್ಯಕ್ಷೆ ಜಯಶೀಲ ಅಧ್ಯಕ್ಷತೆ ವಹಿಸಿದ್ದರು.
ದಾಂಪತ್ಯ ಜೀವನದ 50 ವರ್ಷ ಪೂರೈಸಿದ ದಂಪತಿಗಳಾದ ಹೊನ್ನಪ್ಪ ಗೌಡ ಮತ್ತು ಪುಷ್ಪಾವತಿ ಎಲಿಯ, ಈಶ್ವರ ಗೌಡ ಮತ್ತು ಕಾವೇರಿ ತಂಬುತ್ತಡ್ಕ, ಬಾಳಪ್ಪ ಗೌಡ ಮತ್ತು ಅನಸೂಯಾ ಬಾಕುಡ ಅವರುಗಳನ್ನು ಸನ್ಮಾನಿಸಲಾಯಿತು. ವಿಶೇಷವಾಗಿ ರೇಷ್ಮಾ ಕಾರ್ತಿಕ್ ರವರ ಸೀಮಂತ ಕಾರ್ಯಕ್ರಮ ನಡೆಯಿತು. ಅರುಣೋದಯ ಸಂಘದ ಸದಸ್ಯರು ಪ್ರಾರ್ಥನೆಗೈದರು. ನಳಿನಾಕ್ಷಿ ಭಗವದ್ಗೀತೆ ವಾಚಿಸಿದರು. ಯೋಗೀಶ್ ಸರ್ವೇ ವೀಳ್ಯ ನೀಡಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರೇರಕಿ ಹೇಮಲತಾ ಸ್ವಾಗತಿಸಿ, ಪರಿಚಯ ಪತ್ರ ವಾಚಿಸಿದರು. ಸಂಘದ ಸದಸ್ಯೆ ಕವಿತಾ ವಂದಿಸಿದರು. ಮೇಲ್ವಿಚಾರಕ ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.