ವಿಟ್ಲ: ಅಂಗಡಿಯೊಂದರ ಮುಂದೆ ಯುವಕನೋರ್ವನ ಮೃತದೇಹ ಪತ್ತೆಯಾದ ಘಟನೆ ಕನ್ಯಾನದಲ್ಲಿ ನಡೆದಿದೆ.
ಕನ್ಯಾನ ಪಿಲಿಚಾಮುಂಡಿ ಗುಡ್ಡೆ ನಿವಾಸಿ ಸುರೇಶ್ ನಾಯ್ಕ (32) ಮೃತಪಟ್ಟ ವ್ಯಕ್ತಿಯೆಂದು ಹೇಳಲಾಗಿದೆ.
ಬುಧವಾರ ಸಂಜೆ ಹೊತ್ತಿನಲ್ಲಿ ಕುಳಿತುಕೊಂಡಿದ್ದ ಯುವಕ ಇದ್ದಕ್ಕಿದ್ದಂತೆ ಮೃತಪಟ್ಟ ವಿಚಾರ ಜನರ ಕುತೂಹಲಕ್ಕೆ ಕಾರಣವಾಗಿದೆ.
ವಿಪರೀತ ಕುಡಿತದ ಚಟ ಹೊಂದಿರುವ ಈತ ಅದೇ ಕಾರಣದಿಂದಾಗಿ ಕುಸಿದುಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ತನಿಖೆಯಿಂದ ತಿಳಿದುಬರಬೇಕಾಗಿದೆ