ಕೊಡಗು: ಗುಂಡಿಯನ್ನು ತಪ್ಪಿಸಲು ಹೋದ KSRTC ಬಸ್ ಚಾಲಕ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಕೊಡಗಿನಲ್ಲಿ ನಡೆದಿದೆ.
KSRTC ಬಸ್ ಮೈಸೂರಿನಿಂದ ವಿರಾಜಪೇಟೆ ಕಡೆಗೆ ಚಲಿಸುವ ಬಸ್ ಆಗಿದ್ದು, ಕೊಡಗಿನ ತಿತಿಮತಿ ಸಮೀಪದ ದೇವರಪುರದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದೆ.
ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ 17ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು ಕೆಲವರ ಸ್ಥಿತಿ ಗಂಭೀರವಾಗಿದೆ.
ಅಪಘಾತದಲ್ಲಿ ಬಸ್ ಸಂಪೂರ್ಣ ಜಖಂ ಗೊಂಡಿದೆ. ಬಸ್ ಚಾಲಕನ ಕಾಲು ಮುರಿದಿದ್ದು, ಗಾಯಾಳುಗಳಿಗೆ ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ