ವಿಟ್ಲ : ಬಂಟ್ವಾಳ ತಾಲೂಕಿನ ಪೆರಾಜೆಯ ಬಾಲಕಿ ತೀರ್ಥಶ್ರೀ (8) ಜೋಕಾಲಿಯಲ್ಲಿ ಸಿಲುಕಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಭಂದಿಸಿದಂತೆ ವಿಟ್ಲ ಪೊಲೀಸರು ತನಿಖೆಯನ್ನು ನಡೆಸಿದ್ದಾರೆ.
ತನಿಖೆಯ ವರದಿ ಪ್ರಕಾರ ಅದೊಂದು ಆತ್ಮಹತ್ಯೆಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆರಂಭದಲ್ಲಿ ಆಶೆ ಜೋಕಾಲಿಯ ಹಗ್ಗ ಸಿಲುಕಿ ಮೃತಪಟ್ಟಿರಬಹುದು ಎಂದು ವರದಿಯಾಗಿತ್ತು. ಶೇರಾ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿನಿ ಮಡಲ ನಿವಾಸಿ ಕಿಶೋರ್ ರವರ ಪುತ್ರಿ ತೀರ್ಥಶ್ರೀ ಡಿ 8ರ ಸಂಜೆ 5 ಗಂಟೆಯಿಂದ 7.30ರ ಅವಧಿಯಲ್ಲಿ ಮೃತಪಟ್ಟಿದ್ದಾಳೆ.
ಬಟ್ಟೆ ಹಾಕಲು ಹಾಕಿದ ಸ್ಟೀಲ್ ರಾಡ್ಲೆ ಚಡ್ಡಿಯ ಲಾಡಿಯಿಂದ ಕುಣಿಕೆ ಮಾಡಿ ಒಂದು ತುದಿಯನ್ನು ಸ್ಟೀಲ್ ರಾಡ್ಲೆ ಮತ್ತೂಂದು ತುದಿಯನ್ನು ಕುತ್ತಿಗೆ ಹಾಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಇದೀಗ ಬಾಲಕಿಯ ಸಾವಿನ ನಿಖರ ಕಾರಣ ತಿಳಿಯಲು ವಿಟ್ಲ ಪೊಲೀಸರು ಬಾಲಕಿಯ ಪೋಷಕರಲ್ಲಿ ಮತ್ತು ಸ್ನೇಹಿತರಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.