ಕಡಬ: ತಾಲೂಕಿನ ಪೇರಾಬೆ ಗ್ರಾಮದ ಕುಮಾರಧಾರ ನದಿಯಲ್ಲಿ ಪರವಾನಿಗೆ ಪಡೆದು ಮರುಳುಗಾರಿಕೆ ನಡೆಸುತ್ತಿದ್ದರೂ, ಸ್ಥಳೀಯರಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಇಲಾಖೆಗಳಿಗೂ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಗಣಿ ಇಲಾಖೆ ಅಧಿಕಾರಿಗಳಾದ ವಸುದ ಜಿಪಿಎಸ್ ಅಧಿಕಾರಿ ಯಶವಂತ್, ಕಡಬ ಪೊಲೀಸ್ ಇಲಾಖೆ ಸಬ್ ಇನ್ಸ್ಪೆಕ್ಟರ್, ಸಿಬ್ಬಂದಿ ವರ್ಗ ಕಂದಾಯ ಇಲಾಖೆ ಅಧಿಕಾರಿ ಸಂತೋಷ್, ಪೇರಾಬೆ ಗ್ರಾಮ ಪಂಚಾಯಿತಿ ಪಿಡಿಯೋ ಉಪಸ್ಥಿತಿಯಲ್ಲಿ ತನಿಖೆ ನಡೆಸಿ ಗಡಿ ಗುರುತು ಮಾಡಿದ್ದು, ಇಲ್ಲಿ ನಡೆಯುತ್ತಿರುವ ಮರಳುಗಾರಿಕೆ ಅಕ್ರಮವಾಗಿಲ್ಲ ಸಕ್ರಮವಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಣಿ ಇಲಾಖೆ ಕಂದಾಯ ಇಲಾಖೆ ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಜಂಟಿ ಸರ್ವೆಯನ್ನು ಮಾಡಿ ಈ ಹಿಂದೆ ನೀಡಿರುವ ಮರಳುಗಾರಿಕೆ ನಡೆಸಲು ಆದೇಶದಂತೆ ಸರಿ ಇದೆಯೋ ಇಲ್ಲವೋ ಎಂದು ಅಧಿಕಾರಿ ವರ್ಗದವರು ನೋಡಿದ್ದಾರೆ ಸರಿ ಇದೆ ಎಂದು ಮರಳು ಗುತ್ತಿಗೆದಾರ ಮೋನಪ್ಪ ಗೌಡರಿಗೆ ತಿಳಿಸಿದ್ದಾರೆ. ಆದ್ದರಿಂದ ಈ ಮರಳುಗಾರಿಕೆ ಬಗ್ಗೆ ಆಕ್ಷೇಪ ಮಾಡಿದ ಪೆರಾಬೆ ಗ್ರಾಮದ ಜನರನ್ನು ಕರೆದು ಮರಳುಗಾರಿಕೆಯ ಬಗ್ಗೆ ಸಕ್ರಮವಾಗಿದೆ ಎಂದು ತಿಳಿಯಪಡಿಸಲಾಯಿತು.
ಇನ್ನು ಮುಂದೆ ಸಕ್ರಮ ಮರಳುಗಾರಿಕೆ ನಡೆಸುವ ಬಗ್ಗೆ ಅಡ್ಡಿಪಡಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ಈ ಸಂದರ್ಭ ತಿಳಿಸಿದ್ದಾರೆ.