ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಆಂಬ್ಯುಲೆನ್ಸ್ ಮನೆಯ ಅಂಗಳಕ್ಕೆ ನುಗ್ಗಿದ ಘಟನೆ ನೆಕ್ಕಿಲಾಡಿಯಲ್ಲಿ ನಡೆದಿದೆ.
ಪುತ್ತೂರಿನಿಂದ ನೆಕ್ಕಿಲಾಡಿ ಕಡೆಗೆ ಬರುತ್ತಿದ್ದ ಅಂಬ್ಯುಲೆನ್ಸ್ , ವನಸುಮ ನರ್ಸರಿ ರಸ್ತೆಯಲ್ಲಿರುವ ಮನೆಯೊಂದರ ವರಾಂಡಕ್ಕೆ ನುಗ್ಗಿದೆ.
ಘಟನೆಯಿಂದ ಮನೆಯ ಅವರಣ ಗೋಡೆಗೆ ಹಾನಿಯಾಗಿದ್ದು, ಆ್ಯಂಬುಲೆನ್ಸ್ ಮನೆಯ ಗೋಡೆಗೆ ಢಿಕ್ಕಿಯಾಗುವುದು ಸ್ವಲ್ಪದರಲ್ಲೇ ತಪ್ಪಿದೆ.
ಈ ಸಂದರ್ಭ ರಸ್ತೆ ಬದಿ ಶಾಲಾ ಮಕ್ಕಳು ನಿಂತಿದ್ದು, ಅಪಾಯದಿಂದ ಪಾರಾಗಿದ್ದಾರೆ.