ಪುತ್ತೂರು: ಮುಳಿಯ ಜ್ಯುವೆಲ್ಸ್ ಸಂಸ್ಥಾಪಕರ ದಿನದ ಅಂಗವಾಗಿ ಗ್ರಾಹಕರು ಖರೀದಿಸಿದ ಪ್ರತಿ ಗ್ರಾಂ ಚಿನ್ನದಲ್ಲಿ 50 ರೂಪಾಯಿಯನ್ನು ಸಾಮಾಜಿಕ ಉದ್ದೇಶಗಳಿಗೆ ವಿನಿಯೋಗಿಸುವ ಕಾರ್ಯಕ್ಕೆ ಮುಂದಾಗಿದೆ.
ಮುಳಿಯ ಜ್ಯುವೆಲ್ಸ್ ಸಂಸ್ಥಾಪಕರಾದ ದಿ. ಮುಳಿಯ ಕೇಶವ ಭಟ್ಟ ಅವರು ಜನಿಸಿ 127 ವರ್ಷಗಳಾಗಿದ್ದು, ಇದರ ಅಂಗವಾಗಿ ‘ಮುಳಿಯರ – ಅಳಿಯದ ನೆನಪು’ ಕಾರ್ಯಕ್ರಮವನ್ನು ಡಿ.7, 8, 9ರಂದು ಹಾಕಿಕೊಳ್ಳಲಾಗಿದೆ. ಇದರ ಅಂಗವಾಗಿ ಗ್ರಾಹಕರಿಗೆ ಚಿನ್ನಾಭರಣ ಖರೀದಿಗೆ ಹೆಚ್ಚುವರಿ ಶುಲ್ಕವನ್ನು ವಿಧಿಸದೆ, ಅವರು ಖರೀದಿಸುವ ಚಿನ್ನದ ಗ್ರಾಂ ಲೆಕ್ಕದಲ್ಲಿ ೫೦ ರೂ ವನ್ನು ವಿವಿಧ ಸಾಮಾಜಿಕ ಚಟುವಟಿಕೆಗೆ ಬಳಸುವುದಕ್ಕೆ ಮುಂದಾಗಿದೆ.
ಗುಣಮಟ್ಟದ ಚಿನ್ನಾಭರಣಕ್ಕೆ ಹೆಸರುವಾಸಿಯಾದ ಮುಳಿಯ ಈಗಾಗಲೇ ವಿವಿಧ ಸಾಮಾಜಿಕ ಚಟುವಟಿಕೆಯನ್ನು ನಡೆಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ಹಲವಾರು ವರ್ಷಗಳಿಂದ ಇದನ್ನು ಹಾಕಿಕೊಂಡಿದ್ದು, ಗ್ರಾಹಕರಿಗೆ ಹೊರೆಯಾಗದಂತೆ ಈಗ ಯೋಜನೆಯನ್ನು ಹಮ್ಮಿಕೊಂಡಿದೆ.