ಡ್ರಗ್ಸ್‌ ಪ್ರಕರಣ : ಖ್ಯಾತ ನಟನ ಮಗ ಸೆರೆ

ಚೆನ್ನೈ : ಕನ್ನಡ, ತಮಿಳು ಸೇರಿದಂತೆ ದಕ್ಷಿಣದ ಕೆಲವು ಭಾಷೆಗಳ ಸಿನಿಮಾದಲ್ಲಿ ನಟಿಸಿರುವ ನಟ ಮನ್ಸೂರ್ ಅಲಿ ಖಾನ್‌ರ ಪುತ್ರ ತುಘಲಕ್‌ನನ್ನು ತಮಿಳುನಾಡು ಪೊಲೀಸರು ಡ್ರಗ್ಸ್‌ ಕೇಸಿನಲ್ಲಿ ಬಂಧಿಸಿದ್ದಾರೆ. ಮನ್ಸೂರ್‌ ಅಲಿ ಖಾನ್‌ ಹೆಚ್ಚಾಗಿ ವಿಲನ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಿರುಮಂಗಳಂ ಪೊಲೀಸರು ತುಘಲಕ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 10 ಜನರನ್ನು ಬಂಧಿಸಲಾಗಿತ್ತು. ತನಿಖೆ ಮುಂದುವರಿದಾಗ ಮನ್ಸೂರ್ ಅಲಿ ಖಾನ್ ಪುತ್ರ ತುಘಲಕ್ ಸಹ ಈ ಡ್ರಗ್ಸ್‌ ಜಾಲದಲ್ಲಿ ಶಾಮೀಲಾಗಿರುವುದು ತಿಳಿದುಬಂದಿದೆ. ಹೀಗಾಗಿ ಆತನನ್ನು ಬಂಧಿಸಿ ಆತನಿಂದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.

ಈ ವರ್ಷದ ಆರಂಭದಲ್ಲಿ ನಟ ಮನ್ಸೂರ್ ಅಲಿ ಖಾನ್ ವಿರುದ್ಧವೂ ಕೆಲ ದೂರುಗಳು ದಾಖಲಾಗಿದ್ದವು, ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮನ್ಸೂರ್ ಅಲಿ ಖಾನ್, ‘ನಾನು ‘ಲಿಯೋ’ ಸಿನಿಮಾನಲ್ಲಿ ತ್ರಿಶಾ ಜೊತೆಗೆ ನಟಿಸುತ್ತೇನೆ ಎಂದು ಗೊತ್ತಾದಾಗ ಅದು ಬೆಡ್​ರೂಂ ಸೀನ್ ಇರಬಹುದು ಎಂದುಕೊಂಡಿದ್ದೆ. ನನ್ನ ವೃತ್ತಿ ಜೀವನದಲ್ಲಿ ನಾನು ಸಾಕಷ್ಟು ಹೀರೋಯಿನ್​ಗಳನ್ನು ಬೆಡ್​ರೂಮ್​ಗೆ ಎತ್ತಿಕೊಂಡು ಹೋಗಿ ರೇಪ್​ ಮಾಡಿದ್ದೀನಿ, ಈಗಲೂ ಹಾಗೆಯೇ ಇರುತ್ತದೆ ಎಂದುಕೊಂಡಿದ್ದೆ. ಆದರೆ ಇವರು ಕಾಶ್ಮೀರದಲ್ಲಿ ಸಿನಿಮಾ ಶೂಟಿಂಗ್ ಮಾಡುವಾಗ ತ್ರಿಶಾ ಅನ್ನು ನನಗೆ ತೋರಿಸಲೂ ಇಲ್ಲ ಎಂದಿದ್ದರು.































 
 

ಮನ್ಸೂರ್ ಅಲಿ ಖಾನ್​ರ ಈ ಹೇಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು, ಸ್ವತಃ ತ್ರಿಶಾ, ಮನ್ಸೂರ್ ಹೇಳಿಕೆಯನ್ನು ಖಂಡಿಸಿ ಪೋಸ್ಟ್ ಮಾಡಿದ್ದರು, ಸಿನಿಮಾದ ನಿರ್ದೇಶಕ ಲೋಕೇಶ್ ಕನಗರಾಜ್ ಸಹ ಪೋಸ್ಟ್ ಮಾಡಿ ಮನ್ಸೂರ್ ಮಾತನ್ನು ಖಂಡಿಸಿದ್ದರು. ಮೊದಲಿಗೆ ಮನ್ಸೂರ್ ತಮ್ಮ ಮಾತುಗಳಿಗೆ ಬದ್ಧವಾಗಿರುವುದಾಗಿ ಹೇಳಿದ್ದರೂ ಒತ್ತಡ ಹೆಚ್ಚಾಗುತ್ತಿದ್ದಂತೆ ಕ್ಷಮೆ ಕೇಳಿದ್ದರು.
ಕೆಲ ವರ್ಷದ ಹಿಂದೆ ನಟಿಯೊಬ್ಬರು ಮನ್ಸೂರ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು. ಪ್ರಕರಣದಲ್ಲಿ ಮನ್ಸೂರ್​ಗೆ ಶಿಕ್ಷೆ ಸಹ ಆಗಿತ್ತು. ಆದರೆ ಹೈಕೋರ್ಟ್​ನಲ್ಲಿ ಪ್ರಕರಣವನ್ನು ಕೈಬಿಡಲಾಗಿತ್ತು. ಅದಾದ ಬಳಿಕ 2012ರಲ್ಲಿ ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಬೆದರಿಕೆ ಆರೋಪದಲ್ಲಿ ಮನ್ಸೂರ್ ಅನ್ನು ಬಂಧಿಸಲಾಗಿತ್ತು. 2021ರಲ್ಲಿ ಕೋವಿಡ್​ ಬಗ್ಗೆ ಸುಳ್ಳು ಸುದ್ದಿ ಹರಡಿದ್ದಕ್ಕೆ ಮತ್ತು ಲಸಿಕೆ ವಿಷಯದಲ್ಲಿ ವಂಚನೆ ಮಾಡುವ ಯತ್ನ ಮಾಡಿದ್ದಕ್ಕೆ ಬಂಧಿಸಲಾಗಿತ್ತು. ಈಗ ಅಪ್ಪನಂತೆ ಮಗ, ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top