ಪುತ್ತೂರು ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ನಾಗದೇವರ ಕಟ್ಟೆಗೆ ಅನ್ಯಮತೀಯ ವ್ಯಕ್ತಿಯಿಂದ  ಹಾನಿ | ವಿಶ್ವ ಹಿಂದೂ ಪರಿಷದ್‌ ಬಜರಂಗದಳ ಖಂಡನೆ

ಪುತ್ತೂರು: ತುಳುವರು ಭಕ್ತಿಯಿಂದ ಪೂಜಿಸುವ ಪುತ್ತೂರು ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ನಾಗದೇವರ ಕಟ್ಟೆಗೆ ಅನ್ಯಮತೀಯ ವ್ಯಕ್ತಿ ಹಾನಿಗೊಳಿಸಿದ್ದನ್ನು ವಿಶ್ವ ಹಿಂದೂ ಪರಿಷತ್, ಬಜರಂಗದಳ ತೀವ್ರವಾಗಿ ಖಂಡಿಸಿದೆ.

ಅನ್ಯಮತೀಯ ವ್ಯಕ್ತಿ ಸಲಾಂ ಎಂಬಾತ ಹಾನಿಯುಂಟುಮಾಡಲು ಯತ್ನಿಸಿರುವುದನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.

ಹಿಂದೂ ವಿರೋಧಿ ಶಕ್ತಿಗಳು ವಿನಾಕಾರಣ ಹಿಂದುಗಳ ಆರಾಧನ ಸ್ಥಳಗಳಿಗೆ ಹಾನಿಯುಂಟು ಮಾಡುತ್ತಿರುವ ಘಟನೆಗಳು ಹೆಚ್ಚುತ್ತಿದ್ದು.ಇಂತಹ ಮನಸ್ಥಿತಿಯ ವ್ಯಕ್ತಿಗಳ ಬಗ್ಗೆ ಸರಕಾರ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆಗುವ ಅನಾಹುತಕ್ಕೆ ಇಲಾಖೆ ಹಾಗೂ ಸರಕಾರ ಹೊಣೆಯಾಗಬೇಕಾಗುತ್ತದೆ ಎಂದು ವಿಶ್ವ ಹಿಂದೂ ಪರಿಷದ್‌ ಬಜರಂಗದಳ ಪುತ್ತೂರು ಎಚ್ಚರಿಕೆ ನೀಡಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top