ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ವಿಸ್ತರಣೆ

ಮೊಬೈಲ್‌ ಫೋನ್‌ ಮೂಲಕವೇ ಟಿಕೆಟ್‌ನ ಹಣ ಪಾವತಿಸಬಹುದು

ಬೆಂಗಳೂರು: ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಸುವಾಗ ಕಂಡಕ್ಟರ್ ಜತೆ ಚಿಲ್ಲರೆಗಾಗಿ ಜಗಳ ಮಾಡಬೇಕಿಲ್ಲ. ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಬಹುತೇಕ ಎಲ್ಲ ಕೆಎಸ್​ಆರ್​​ಟಿಸಿ ಬಸ್​ಗಳಿಗೂ ಇದೀಗ ವಿಸ್ತರಣೆಯಾಗಿದ್ದು, ಯುಪಿಐ ಆ್ಯಪ್ ಮೂಲಕವೇ ಟಿಕೆಟ್ ಹಣ ಪಾವತಿ ಮಾಡಬಹುದಾಗಿದೆ. ಸುಮಾರು 9,000 ಬಸ್‌ಗಳಲ್ಲಿ ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆಯನ್ನು ನ.6ರಂದು ಕೆಎಸ್​ಆರ್​​ಟಿಸಿ ಬಸ್​​ಗಳಲ್ಲಿ ಆರಂಭಿಸಲಾಗಿತ್ತು. ಸದ್ಯ ನಿಗಮದ ಎಲ್ಲ 8,941 ಬಸ್‌ಗಳಿಗೆ ಈ ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ. ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಆರಂಭದಲ್ಲೇ ಗಣನೀಯ ಯಶಸ್ಸು ಸಾಧಿಸಿದೆ. ಸಂಸ್ಥೆಯ ದೈನಂದಿನ ಆದಾಯದ 7 ಕೋಟಿ ರೂ. (ಶಕ್ತಿ ಯೋಜನೆ ಮತ್ತು ವಿದ್ಯಾರ್ಥಿ ಪಾಸ್ ಫಲಾನುಭವಿಗಳನ್ನು ಹೊರತುಪಡಿಸಿ) ಪೈಕಿ 30-40 ಲಕ್ಷ ರೂಪಾಯಿ ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಮೂಲಕವೇ ಪಾವತಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, ಎನಿವೇರ್ ಎನಿಟೈಮ್ ಅಡ್ವಾನ್ಸ್ಡ್ ರಿಸರ್ವೇಶನ್ ಸಿಸ್ಟಮ್ (ಅವತಾರ್) ಮೂಲಕ 28,000 ಬುಕಿಂಗ್‌ಗಳಿಂದ ಕೆಎಸ್‌ಆರ್‌ಟಿಸಿ ಇನ್ನೂ 1.5 ಕೋಟಿ ರೂಪಾಯಿ ಆದಾಯ ಸಂಗ್ರಹಿಸಿದೆ.































 
 

2024-25 ಆರ್ಥಿಕ ವರ್ಷದ ಅಂತ್ಯದ ವೇಳೆಗೆ, ತನ್ನ ದೈನಂದಿನ ಆದಾಯದ ಶೇ 60-70 ರಷ್ಟನ್ನು ಡಿಜಿಟಲ್ ಮತ್ತು ಕ್ಯುಆರ್ ಪಾವತಿ ವಿಧಾನಗಳ ಮೂಲಕ ಪಡೆಯುವ ಗುರಿಯನ್ನು ಕೆಎಸ್​ಆರ್​ಟಿಸಿ ಹೊಂದಿದೆ.

ಯುಪಿಐ ಪಾವತಿ ಸುಲಭಗೊಳಿಸಲು ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳ (ಇಟಿಎಂ) ನಿಯೋಜನೆಯೊಂದಿಗೆ ಪ್ರಾಯೋಗಿಕ ಆಧಾರದ ಮೇಲೆ ಕ್ಯುಆರ್ ಪಾವತಿ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. ನವೆಂಬರ್ 11ರ ಹೊತ್ತಿಗೆ, ಎಲ್ಲ 83 ಡಿಪೋಗಳು ತಲಾ ಐದು ಯಂತ್ರಗಳನ್ನು ಪಡೆದಿವೆ ಮತ್ತು ನವೆಂಬರ್ 18ರ ಹೊತ್ತಿಗೆ, ಪ್ರತಿಯೊಂದು ಬಸ್‌ ನೀಡಲಾಗಿದೆ.

ಕ್ಯುಆರ್ ಕೋಡ್ ಆಧಾರಿತ ಟಿಕೆಟ್ ಪಾವತಿ ವ್ಯವಸ್ಥೆ ಎಲ್ಲ ಕೆಎಸ್ಆರ್​ಟಿಸಿ ಬಸ್​​ಗಳಲ್ಲಿ ಲಭ್ಯವಿದೆ. ಒಂದು ವರ್ಷದಲ್ಲಿ, ನಮ್ಮ ದೈನಂದಿನ ಆದಾಯದ ಪ್ರಮುಖ ಭಾಗವು ಡಿಜಿಟಲ್ ಮತ್ತು ಕ್ಯುಆರ್ ಪಾವತಿಗಳಿಂದ ಬರುತ್ತದೆ ಎಂಬ ಭರವಸೆ ಹೊಂದಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top