ಪುತ್ತೂರು: ಡಿ.4 ರಂದು ನಡೆಯಬೇಕಿದ್ದ ಕೋಡಿಂಬಾಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಸದಸ್ಯರ ಕೋರಂ ಕೊರತೆಯ ಹಿನ್ನೆಲೆಯಲ್ಲಿ ರದ್ದುಗೊಂಡಿದೆ.
11 ಮಂದಿ ಸದಸ್ಯರನ್ನು ಗ್ರಾಮ ಪಂಚಾಯಿತಿ ಹೊಂದಿದೆ. ಈ ಪೈಕಿ ಅಧ್ಯಕ್ಷೆ ಮಲ್ಲಿಕಾ, ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಸದಸ್ಯರಾದ ಉಷಾ ಲಕ್ಷ್ಮಣ ಪೂಜಾರಿ, ಪುಷ್ಪಾ ಅವರುಗಳು ಮಾತ್ರ ಸಭೆಗೆ ಹಾಜರಾಗಿದ್ದರು. ಉಳಿದಂತೆ ಜಗನ್ನಾಥ ಶೆಟ್ಟಿ ನಡುಮನೆ, ಗೀತಾ, ಪೂರ್ಣಿಮಾ, ರಾಮಣ್ಣ ಗೌಡ ಗುಂಡೋಳೆ, ರಾಮಚಂದ್ರ ಪೂಜಾರಿ ಶಾಂತಿನಗರ, ವಿಶ್ವನಾಥ ಹಾಗೂ ಮೋಹಿನಿಯವರು ಸಭೆಗೆ ಗೈರಾಗಿದ್ದರು.
ಈ ಹಿನ್ನಲೆಯಲ್ಲಿ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.