ವಿಟ್ಲ: ಆಟೋ ಚಾಲಕರೊಬ್ಬರು ಬಾಡಿಗೆಗೆಂದು ತೆರಳಿ ನಾಪತ್ತೆಯಾದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಬಾಯಿಲ ನಿವಾಸಿ ಧನರಾಜ್ ನಾಪತ್ತೆಯಾಗಿದ್ದು, ಅವರ ಆಟೋ ರಿಕ್ಷಾ, ಉಪ್ಪಿನಂಗಡಿಯಲ್ಲಿ ಪತ್ತೆಯಾಗಿದೆ. ಮೊಬೈಲ್ ಸ್ವಿಚ್ ಆಗಿದೆ.
ನ.28 ರಂದು ತನ್ನ ಮನೆಯಿಂದ ಆಟೋರಿಕ್ಷಾವನ್ನು ತೆಗೆದುಕೊಂಡು ಬೆಳಿಗ್ಗೆ ಹೊರಟಿದ್ದು ವಾರ ಕಳೆದರೂ ಮನೆಗೆ ವಾಪಸು ಬಂದಿಲ್ಲ. ಈ ಬಗ್ಗೆ ಸಂಬಂದಿಕರಲ್ಲಿ ನೆರೆಕರೆಯವರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಲಾಗಿ ಎಲ್ಲಿಯೂ ಪತ್ತೆಯಾಗದೆ ಕಾಣೆಯಾಗಿರುತ್ತಾರೆ ಮನಯವರು ಠಾಣೆಗೆ ನೀಡಿದ ಎಂದು ದೂರಿನಲ್ಲಿ ತಿಳಿಸಿದ್ದು, ಪತ್ತೆಹಚ್ಚಿ ಕೊಡುವಂತೆ ವಿನಂತಿಸಿದ್ದಾರೆ.